ಕರಾಚಿ: ನಿಷೇಧದ ಶಿಕ್ಷೆ ಪೂರ್ಣಗೊಳಿಸಿರುವ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಉಮರ್ ಅಕ್ಮಲ್ ಭ್ರಷ್ಟಾಚಾರ ತಡೆ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಪಿಸಿಬಿಗೆ ಬರೋಬ್ಬರಿ 45 ಲಕ್ಷ ಪಾಕಿಸ್ತಾನ ರೂಪಾಯಿ ಮೊತ್ತವನ್ನು ದಂಡವಾಗಿ ಕಟ್ಟಿದ್ದಾರೆ.
2020ರ ಪಿಎಸ್ಎಲ್ಗು ಮುನ್ನ ಭ್ರಷ್ಟಾಚಾರ ತಡೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಒಂದು ವರ್ಷ ನಿಷೇಕ್ಕೊಳಗಾಗಿದ್ದರು. ಇದೀಗ ನಿಷೇಧದ ಅವಧಿ ಪೂರ್ಣಗೊಂಡಿದ್ದು ಪುನಶ್ಚೇತನ ಶಿಬಿರಕ್ಕೆ ಒಳಗಾಗಬೇಕಾದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ 45 ಲಕ್ಷ ರುಪಾಯಿಯಯನ್ನು ಕಟ್ಟಬೇಕಿತ್ತು. ಇದೀಗ ಬುಧವಾರ ಉಮರ್ ಅಕ್ಮಲ್ ದಂಡ ಮೊತ್ತವನ್ನು ಪಾವತಿಸಿದ್ದು, ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ ಎಂದು ಪಿಸಿಬಿ ತಿಳಿಸಿದೆ.