ನವದೆಹಲಿ:ಮುಂದಿನ ವರ್ಷ ನಡೆಯಲಿರುವ ಐಸಿಸಿ (ICC) ಟಿ-20 ವಿಶ್ವಕಪ್ (World Cup)ಗೆ ಚೊಚ್ಚಲ ಬಾರಿಗೆ ಉಗಾಂಡ ತಂಡ ಅರ್ಹತೆ ಪಡೆದಿದೆ. ವಿಶ್ವಕಪ್ ಅರ್ಹತ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ತೋರಿರುವ ಉಗಾಂಡ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆಲುವು ದಾಖಲಿಸಿದೆ. ಇಂದು ನಡೆದ ಕ್ವಾಲಿಫೈಯರ್ ಹಂತದ ಕೊನೆಯ ಸುತ್ತಿನ ಪಂದ್ಯದಲ್ಲಿ ರುವಾಂಡಾವನ್ನು ಸೋಲಿಸುವ ಮೂಲಕ ಉಗಾಂಡ ವಿಶ್ವಕಪ್‌ಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
ಮತ್ತೊಂದೆಡೆ ಜಿಂಬಾಬ್ವೆ ಅರ್ಹತಾ ಸುತ್ತಿನಲ್ಲಿ ನಮೀಬಿಯಾ ಮತ್ತು ಉಗಾಂಡ ವಿರುದ್ಧ ಸೋಲನ್ನು ಎದುರಿಸಿ ವಿಶ್ವಕಪ್ ರೇಸ್ನಿಂದ ಹೊರ ಬಿದ್ದಿದೆ. ಕಳೆದ T20 ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದ ಜಿಂಬಾಬ್ವೆ ಪಾಕಿಸ್ತಾನವನ್ನು ಬಗ್ಗು ಬಡೆದಿತ್ತು. ಇದಕ್ಕೂ ಮುನ್ನಾ ಜಿಂಬಾಬ್ವೆ ತಂಡ ತವರಿನಲ್ಲಿ ನಡೆದ 2019 ಮತ್ತು 2023 ODI ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸೋಲನ್ನು ಕಂಡು ಹೊರ ಬಿದ್ದಿತ್ತು. ಉಳಿದಂತೆ 2021ರ T-20 ವಿಶ್ವಕಪ್‌ನಲ್ಲಿ ತಂಡ ಅರ್ಹತ ಪಂದ್ಯಗಳನ್ನು ಆಡಲು ಆಗಿರಲಿಲ್ಲ. ಆ ಸಮಯದಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ICC ಅಮಾನತುಗೊಳಿಸಿತ್ತು.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಏಳು ವಿಕೆಟ್‌ಗಳಿಂದ ಸೋಲು ಕಂಡು ಕಳಪೆ ಆರಂಭ ಪಡೆಯಿತು. ಅಂಕಪಟ್ಟಿಯ ಅಗ್ರ ಎರಡು ಸ್ಥಾನ ತಲುಪಲು ಜಿಂಬಾಬ್ವೆ ತನ್ನು ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು. ಆದರೆ ಅದು ಸಾಧ್ಯವಾಗದೇ ಇದೀಗ ಟಿ20 ವಿಶ್ವಕಪ್ನಿಂದ ಹೊರಬಿದ್ದಿದೆ.