ಕರ್ನಾಟಕ

karnataka

ETV Bharat / sports

ಐಸಿಸಿ ಟಿ-20 ವಿಶ್ವಕಪ್​ ಆಯೋಜಿಸಲು ಯುಎಇ ನಮ್ಮ 2ನೇ ಆಯ್ಕೆ : ಬಿಸಿಸಿಐ - ಟಿ20 ವಿಶ್ವಕಪ್ ಇತ್ತೀಚಿನ ಸುದ್ದಿ

ಭಾರತದಲ್ಲಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಮತ್ತು 2 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಒಂದು ವೇಳೆ ಅಕ್ಟೋಬರ್​ವರೆಗೆ ಈ ಬಿಕ್ಕಟ್ಟು ಮುಗಿಯದಿದ್ದರೆ, ಐಸಿಸಿ ಟ್ವೆಂಟಿ - 20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗುವುದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್​
ಐಸಿಸಿ ಟಿ20 ವಿಶ್ವಕಪ್​

By

Published : May 1, 2021, 4:53 PM IST

ನವದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ - ನವೆಂಬರ್​ನಲ್ಲಿ ಟಿ-20 ವಿಶ್ವಕಪ್​ ಆಯೋಜಿಸಲು ಯುಎಇಯನ್ನು ಬಿಸಿಸಿಐ ತನ್ನ ಎರಡನೇ ಆಯ್ಕೆಯಾಗಿ ಘೋಷಿಸಿದೆ.

ಭಾರತದಲ್ಲಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಮತ್ತು 2 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಒಂದು ವೇಳೆ, ಅಕ್ಟೋಬರ್​ವರೆಗೆ ಈ ಬಿಕ್ಕಟ್ಟು ಮುಗಿಯದಿದ್ದರೆ, ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗುವುದು ಬಿಸಿಸಿಐ ಶನಿವಾರ ತಿಳಿಸಿದೆ.

ಭಾರತದಲ್ಲಿ ಟಿ-20 ವಿಶ್ವಕಪ್ ಆಯೋಜನೆ ಸಾಧ್ಯವಾಗದಿದ್ದರೆ, ಯುಎಇ ನಮ್ಮ ಆಯ್ಕೆಯಾಗಿರುತ್ತದೆ. ಬಿಸಿಸಿಐ ಕೂಡ ಇದೇ ರೀತಿಯಲ್ಲಿ ಆಲೋಚಿಸಬಹುದು ಎಂದು ನಾವು ಆಶಿಸುತ್ತಿದ್ದೇವೆ ಎಂದು ಬಿಸಿಸಿಐ ಜನರಲ್ ಮ್ಯಾನೇಜರ್ ಧೀರಜ್ ಮಲ್ಹೋತ್ರಾ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆಯೂ ಬಯೋಬಬಲ್ ವ್ಯವಸ್ಥೆಯಡಿಯಲ್ಲಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಅನ್ನು ಆಯೋಜಿಸಲಾಗುತ್ತಿದೆ. ಸದ್ಯಕ್ಕೆ ಮಂಡಳಿಯು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು

" ನಾನು ಟೂರ್ನಮೆಂಟ್​ನ ನಿರ್ದೇಶಕರಲ್ಲಿ ಒಬ್ಬನಾಗಿ ಹೆಸರಿಸಲ್ಪಟ್ಟಿದ್ದೇನೆ. ಹಾಗಾಗಿ ವಿಶ್ವಕಪ್​ ಸಂಭವಿಸಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಎಲ್ಲವನ್ನು ಮಾಡುತ್ತಿದ್ದೇನೆ. ಆದರೆ, ಟೂರ್ನಮೆಂಟ್​ನ ಅಂತಿಮ ತೀರ್ಮಾನವನ್ನು ಐಸಿಸಿಗೆ ಬಿಟ್ಟದ್ದು ಎಂದು ಮಲ್ಹೋತ್ರಾ ಹೇಳಿದ್ದಾರೆ.

ಕಳೆದ ವರ್ಷವೂ ಕೂಡ ಕೋವಿಡ್ 19 ಕಾರಣದಿಂದಲೇ ಆಸ್ಟ್ರೇಲಿಯಾದಿಂದ ಟಿ20 ವಿಶ್ವಕಪ್​ 2022ಕ್ಕೆ ಮುಂದೂಡಲ್ಪಟ್ಟಿತ್ತು. ಇದೀಗ 2021ರ ವಿಶ್ವಕಪ್ ಕೂಡ ತೂಗುಯ್ಯಾಲೆಗೆ ಬಂದು ನಿಂತಿದೆ.

ಇದನ್ನು ಓದಿ:ವಯಸ್ಸು ಹೆಚ್ಚಾದಂತೆ ಗೇಲ್​​ ಅದ್ಭುತವಾಗಿ ಆಡುತ್ತಿದ್ದಾರೆ: ಕೆ.ಎಲ್.ರಾಹುಲ್​

ABOUT THE AUTHOR

...view details