ಆಂಟಿಗುವಾ: ಬುಧವಾರ ನಡೆಯಲಿರುವ ಅಂಡರ್-19 ವಿಶ್ವಕಪ್ನ ಬ್ಲಾಕ್ಬಸ್ಟರ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಡಲಿವೆ. ಕೋವಿಡ್-19 ಹೊಡೆತಕ್ಕೆ ಸಿಲುಕಿದರೂ ಅಂತಿಮ 4ರ ಹಣಾಹಣಿಗೆ ಪ್ರವೇಶ ಪಡೆದಿರುವ ಭಾರತ ತಂಡ 8ನೇ ಬಾರಿ ಫೈನಲ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿದೆ.
ಕಿರಿಯರ ವಿಶ್ವಕಪ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡಗಳಾಗಿವೆ. ಭಾರತ ತಂಡ 4 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರೆ, ಕಾಂಗರೂ ಪಡೆ 3 ಬಾರಿ ಚಾಂಪಿಯನ್ ಆಗಿದೆ. ಭಾರತ 2018ರಲ್ಲಿ ಮತ್ತು ಆಸ್ಟ್ರೇಲಿಯಾ 2010ರಲ್ಲಿ ಕೊನೆಯ ಬಾರಿ ಚಾಂಪಿಯನ್ ಆಗಿವೆ.
ಪ್ರಸ್ತುತ ವಿಶ್ವಕಪ್ ತಯಾರಿಯಲ್ಲಿ ಭಾರತ ತಂಡ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿತ್ತು. ಕೋವಿಡ್ ಹೊಡೆತಕ್ಕೆ ಸಿಲುಕಿದ್ದರಿಂದ ಬಿಸಿಸಿಐ ಯಾವುದೇ ವಯೋಮಿತಿ ಟೂರ್ನಮೆಂಟ್ ಆಯೋಜಿಸಿರಲಿಲ್ಲ. ಆದರೂ ವಿಶ್ವಕಪ್ಗೆ ಮುನ್ನ ನಡೆದ ಏಷ್ಯಾ ಕಪ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಆಗಿದ್ದ ಯುವಪಡೆ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಾಲ್ಕು ಬಾರಿಯ ಚಾಂಪಿಯನ್ ದಕ್ಷಿಣ ಆಫ್ರಿಕಾ ವಿರುದ್ಧ 45 ರನ್ಗಳ ಜಯ ಸಾಧಿಸಿ ಅದ್ಭುತವಾಗಿ ತಮ್ಮ ಅಭಿಯಾನ ಆರಂಭಿಸಿತ್ತು. ಆದರೆ, ನಂತರದ ಐರ್ಲೆಂಡ್ ಪಂದ್ಯದ ವೇಳೆ ನಾಯಕ ಯಶ್ ಧುಲ್ ಸೇರಿದಂತೆ ಕೆಲವು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಉಳಿದಿದ್ದ 11 ಆಟಗಾರರ ತಂಡವನ್ನೇ ಕಣಕ್ಕಿಳಿಸಬೇಕಾದ ಅನಿವಾರ್ಯವಾಗಿತ್ತು. ತಂಡದ ಐವರು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೇ ಕಣ್ಣಕ್ಕಿಳಿದ ತಂಡ ಐರ್ಲೆಂಡ್(307/5) ಮತ್ತು ಉಗಾಂಡ(405/5) ವಿರುದ್ಧ ಪ್ರಾಬಲ್ಯಯುತ ಜಯ ಸಾಧಿಸಿ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.