ಹೈದರಾಬಾದ್:ಅಂಡರ್-19 ವಿಶ್ವಕಪ್ ಮೂಲಕ ಬೇಬಿ ಎಬಿ ಎಂದೇ ಫೇಮಸ್ ಆಗಿರುವ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ಟೀಂ ಇಂಡಿಯಾದ ಶಿಖರ್ ಧವನ್ ನಿರ್ಮಿಸಿದ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿಡಿ ಶೈಲಿಯಲ್ಲೇ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿರುವ ಬ್ರೆವಿಸ್, ಪ್ರಸ್ತುತ ಅಂಡರ್-19 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ 7 & 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ದಕ್ಷಿಣ ಆಫ್ರಿಕಾದ ಬ್ರವಿಸ್ 130 ಎಸೆತಗಳಲ್ಲಿ 138ರನ್ಗಳಿಕೆ ಮಾಡಿದ್ದು, ಇದರಲ್ಲಿ ಏಳು ಆಕರ್ಷಕ ಸಿಕ್ಸರ್ ಮತ್ತು 11 ಬೌಂಡರಿ ಸೇರಿಕೊಂಡಿವೆ.
ಇದನ್ನೂ ಓದಿರಿ:PAK vs AUS : 24 ವರ್ಷದ ನಂತರ ಪಾಕ್ ಪ್ರವಾಸ ಕೈಗೊಳ್ಳಲಿದೆ ಆಸೀಸ್.. ಮಾರ್ಚ್ 4ರಿಂದ ಸರಣಿ ಶುರು
ಶಿಖರ್ ಧವನ್ ದಾಖಲೆ ಬ್ರೇಕ್ ಮಾಡಿದ ಬೇಬಿ ಎಬಿ:2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾದಲ್ಲಿದ್ದ ಶಿಖರ್ ಧವನ್ 505ರನ್ಗಳಿಕೆ ಮಾಡಿದ್ದರು. ಇದೀಗ ಬ್ರೆವಿಸ್ ಈ ರೆಕಾರ್ಡ್ ಬ್ರೇಕ್ ಮಾಡಿದ್ದು, 6 ಪಂದ್ಯಗಳಿಂದ 506ರನ್ಗಳಿಕೆ ಮಾಡಿದ್ದಾರೆ.