ಕರ್ನಾಟಕ

karnataka

ETV Bharat / sports

ರಣಜಿಯಲ್ಲಿ ಯಶ್​ 'ಧೂಳ್'​: ಛತ್ತಿಸ್​ಗಡದ ವಿರುದ್ಧ ದ್ವಿಶತಕ ಸಿಡಿಸಿದ U19 ಚಾಂಪಿಯನ್ - ಅಂಡರ್​ 19 ವಿಶ್ವಕಪ್ ವಿಜೇತ ನಾಯಕ ಯಶ್​ ಧುಲ್

ಅಂಡರ್​ 19 ವಿಶ್ವಕಪ್​ನಲ್ಲಿ ದೇಶಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಯಶ್​, ನಂತರ ರಣಜಿ ಕ್ರಿಕಟ್​ಗೆ ಪಾದಾರ್ಪಣೆ ಮಾಡಿದ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲೂ ಶತಕ ಸಿಡಿಸಿ ಕ್ರಿಕೆಟ್​ ವಲಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ 3ನೇ ಪ್ರಥಮ ದರ್ಜೆ ಪಂದ್ಯದಲ್ಲಿ ದ್ವಿಶತಕದ ರುಚಿಯನ್ನು ಸವಿದಿದ್ದಾರೆ.

U19 star Yash Dhull score maiden double hundred in Ranji Trophy 2022
ಯಶ್ ಧುಲ್ ದ್ವಿಶತಕ

By

Published : Mar 6, 2022, 9:21 PM IST

ಗುವಾಹಟಿ: ಅಂಡರ್​ 19 ವಿಶ್ವಕಪ್​ ವಿಜೇತ ಭಾರತ ತಂಡದ ನಾಯಕ ಯಶ್​ ಧುಲ್ ರಣಜಿ ಟ್ರೋಫಿಯಲ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದು, ಆಡುತ್ತಿರುವ 3ನೇ ಪಂದ್ಯದಲ್ಲೇ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇದು ಈ ಆವೃತ್ತಿಯಲ್ಲಿ ಸಿಡಿಸಿದ 3ನೇ ಶತಕವಾಗಿದೆ.

ಅಂಡರ್​ 19 ವಿಶ್ವಕಪ್​ನಲ್ಲಿ ದೇಶಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದ ಯಶ್​, ನಂತರ ರಣಜಿ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲೂ ಶತಕ ಸಿಡಿಸಿ ಕ್ರಿಕೆಟ್​ ವಲಯಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ತಮ್ಮ 3ನೇ ಪ್ರಥಮ ದರ್ಜೆ ಪಂದ್ಯದಲ್ಲಿ ದ್ವಿಶತದ ರುಚಿಯನ್ನು ಸವಿದಿದ್ದಾರೆ.

ಛತ್ತಿಸ್​ಗಡದ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಯಶ್ ಧುಲ್ 261 ಎಸೆತಗಳಲ್ಲಿ 26 ಬೌಂಡರಿ ಸಹಿತ ಅಜೇಯ 200ರನ್​ಗಳಿಸಿದರು. ತಮ್ಮ ಆರಂಭಿಕ ಬ್ಯಾಟರ್​ ಧ್ರುವ್ ಶೋರೆ ಜೊತೆಗೂಡಿ ಮೊದಲ ವಿಕೆಟ್​ಗೆ 246 ರನ್​ಗಳನ್ನು ಸೇರಿಸಿ ಗೆಲುವಿನ ಆಸೆಯಲ್ಲಿದ್ದ ಛತ್ತಿಸ್​ಗಡಕ್ಕೆ ನಿರಾಶೆ ಮೂಡಿಸಿದರು.

ಯಶ್​ ಧುಲ್ 3 ಪಂದ್ಯಗಳಲ್ಲಿ 119ರ ಸರಾಸರಿಯಲ್ಲಿ 200 ಗರಿಷ್ಠ ರನ್​ ಸೇರಿದಂತೆ 3 ಶತಕ ಸಹಿತ 479 ರನ್​ ಸಿಡಿಸಿ 2022ರ ರಣಜಿ ಟ್ರೋಫಿಯಲ್ಲಿ ಗರಿಷ್ಠ ರನ್​ ಸಿಡಿಸಿದ 5ನೇ ಬ್ಯಾಟರ್​ ಎನಿಸಿಕೊಂಡರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಛತ್ತಿಸ್​ಗಡ 482 ರನ್​ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ಡೆಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 295ಕ್ಕೆ ಆಲೌಟ್​ ಆಗಿ ಫಾಲೊ ಆನ್​ಗೆ ತುತ್ತಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಕಳೆದುಕೊಂಡು 396 ರನ್​ಗಳಿಸಿ ಪಂದ್ಯ ಡ್ರಾ ಸಾಧಿಸಿತು.

ಹೆಚ್​ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜಾರ್ಖಂಡ್​ ತಂಡ ತಮಿಳುನಾಡಿನ ವಿರುದ್ಧ 2 ವಿಕೆಟ್​ಗಳ ರೋಚಕ ಜಯ ಸಾಧಿಸಿ 12 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತು. ಛತ್ತಿಸ್​ಗಡ 10 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದರೆ, ತಮಿಳುನಾಡು(6) ಮತ್ತು ಡೆಲ್ಲಿ(2) ಅಂಕ ಪಡೆದು ಕೊನೆಯ ಸ್ಥಾನ ಪಡೆದುಕೊಂಡವು.

ಇದನ್ನೂ ಓದಿ:ಶ್ರೀ'ಲಂಕಾ ದಹನ' ಮಾಡಿದ ಜಡೇಜಾ: ಭಾರತಕ್ಕೆ ಇನ್ನಿಂಗ್ಸ್​ ಮತ್ತು 222 ರನ್​ಗಳ ಜಯ

ABOUT THE AUTHOR

...view details