ದುಬೈ:2022ರ ಅಂಡರ್ 19 ವಿಶ್ವಕಪ್ ಟೂರ್ನಿಗೆ( U19 Men’s World Cup) ವೆಸ್ಟ್ ಇಂಡೀಸ್(west indies) ಆತಿಥ್ಯವಹಿಸುವುದು ಖಚಿತವಾಗಿದೆ . 22 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 16 ತಂಡಗಳು 48 ಪಂದ್ಯಗಳನ್ನಾಡಲಿದೆ.
19 ವರ್ಷದೊಳಗಿನ ಪುರುಷರ ಕ್ರಿಕೆಟ್ ವಿಶ್ವಕಪ್ ಅತ್ಯುತ್ತಮ ಸ್ಪರ್ಧೆ ಮತ್ತು ಮನರಂಜನೆಯನ್ನು ನೀಡುವ ಜೊತೆಗೆ ಭವಿಷ್ಯದ ತಾರೆಗಳನ್ನು ಕ್ರಿಕೆಟ್ ಜಗತ್ತಿಗೆ ತೋರಿಸುವ ಒಂದು ಬೃಹತ್ ವೇದಿಕೆಯಾಗಿದೆ. ವಿರಾಟ್ ಕೊಹ್ಲಿ, ಬಾಬರ್ ಅಜಮ್, ಜೋ ರೂಟ್, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಶಿಮ್ರಾನ್ ಹೆಟ್ಮಾಯಿರ್, ಶುಬ್ಮನ್ ಗಿಲ್ ಸೇರಿದಂತೆ ಸಾಕಷ್ಟು ಉದಾಹರಣೆ ನಮ್ಮ ಕಣ್ಣ ಮುಂದಿದೆ. ಇದೀಗ 2022ಕ್ಕೆ ಮತ್ತೊಂದು ಯುವ ಸಮೂಹ ವೆಸ್ಟ್ ಇಂಡೀಸ್ನಲ್ಲಿ ನಡೆಯುವ ಟೂರ್ನಿಯಲ್ಲಿ ಕ್ರಿಕೆಟ್ ಜಗತ್ತಿಗೆ ಪರಿಚಯವಾಗಲಿದೆ.
ಟೂರ್ನಮೆಂಟ್ ಕೆರಿಬಿಯನ್ ರಾಷ್ಟ್ರಗಳಾದ(Caribbean countries) ಆ್ಯಂಟಿಗುವಾ ಮತ್ತು ಬಾರ್ಬುಡಾಸ್, ಗಯಾನ, ಸೇಂಟ್ ಕಿಟ್ಸ್ ಮತ್ತು ನೇವಿಸ್ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೋಗಳಲ್ಲಿ ನಡೆಯಲಿದೆ.
ಆದರೆ ಈ ಟೂರ್ನಮೆಂಟ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಟೂರ್ನಿಯಿಂದ ಹಿಂದೆ ಸರಿದಿದೆ. ಟೂರ್ನಿ ಮುಗಿಸಿ ಹಿಂತಿರುಗಿದಾಗ ಕಠಿಣ ಕ್ವಾರಂಟೈನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಕಾರಣ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾಗಿ ಸ್ಕಾಟ್ಲೆಂಡ್ ತಂಡ ಕಿವೀಸ್ ಸ್ಥಾನದಲ್ಲಿ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.