ದುಬೈ: ಅಂಡರ್-19 ಏಕದಿನ ಏಷ್ಯಾಕಪ್ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಕಿರಿಯರ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ವಿರುದ್ಧ ಕೊನೆ ಎಸೆತದಲ್ಲಿ ಸೋಲು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ಮೊದಲು ಸೋಲು ದಾಖಲು ಮಾಡಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 14 ರನ್ಗಳಿಕೆ ಮಾಡುವಷ್ಟರಲ್ಲಿ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. ಆರಂಭಿಕರಾಗಿ ಕಣಕ್ಕಿಳಿದ ರಘುವಂಶಿ(0), ಶಿಖಾ ರಾಶೀದ್(6), ಕ್ಯಾಪ್ಟನ್ ಯಶ್ ದುಲ್(0) ಹಾಗೂ ನಿಶಾಂತ್ ಸಿಂಧು(8)ರನ್ಗಳಿಕೆ ಮಾಡಿ ನಿರಾಶೆ ಮೂಡಿಸಿದರು.
ಆದರೆ ತಂಡಕ್ಕೆ ಆಸರೆಯಾದ ಹರ್ನೂರ್ ಸಿಂಗ್ 46ರನ್ ಹಾಗೂ ರಾಜ ಭಾವ್ 25ರನ್ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಇದಾದ ಬಳಿಕ ಕಣಕ್ಕಿಳಿದ ವಿಕೆಟ್ ಕೀಪರ್ ಆರಾಧ್ಯ ಯಾದವ್ 50ರನ್ಗಳಿಕೆ ಮಾಡಿ ತಂಡ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಕೊನೆಯದಾಗಿ ತಂಡದ ಪರ ಕೌಶಲ್ ತಾಂಬೆ 32ರನ್, ರಾಜವರ್ಧನ್ 33ರನ್ಗಳಿಕೆ ಮಾಡಿದರು. ಈ ಮೂಲಕ ತಂಡ 49 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 237 ರನ್ಗಳಿಕೆ ಮಾಡಿತು. ಪಾಕ್ ಪರ ಜಮೀರ್ 5 ವಿಕೆಟ್, ಆವಾಸ್ ಅಲಿ 2 ವಿಕೆಟ್ ಪಡೆದುಕೊಂಡರೆ, ಅಕ್ರಮ್ ಹಾಗೂ ಸಾದಿಕ್ತ್ ತಲಾ 1 ವಿಕೆಟ್ ಪಡೆದುಕೊಂಡರು.