ತರೌಬ(ವೆಸ್ಟ್ ಇಂಡೀಸ್): ಅಂಡರ್-19 ವಿಶ್ವಕಪ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತದ ಮರಿ ಟೈಗರ್ಸ್ ಬ್ಯಾಟಿಂಗ್ನಲ್ಲಿ ಆರ್ಭಟಿಸಿದ್ದಾರೆ. ಕ್ರಿಕೆಟ್ ಶಿಶು ಉಗಾಂಡ ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ ದಾಖಲೆಯ 405ರನ್ಗಳಿಕೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ 40ರನ್ಗಳಿಕೆ ಮಾಡುವಷ್ಟರಲ್ಲಿ ಹರ್ನೂರ್ ಸಿಂಗ್(15) ವಿಕೆಟ್ ಕಳೆದುಕೊಂಡಿತು. ಈ ವೇಳೆ ಕಣಕ್ಕಿಳಿದ ಕ್ಯಾಪ್ಟನ್ ನಿಶಾಂತ್ ಸಿಂಧು ಕೂಡ 15ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ 85ರನ್ಗಳಿಕೆ ಮಾಡುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಆರಂಭಿಕ ಆಟಗಾರ ರಘುವಂಶಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ರಾಜ್ ಬಾವಾ ದಾಖಲೆಯ 200ರನ್ಗಳ ಜೊತೆಯಾಟವಾಡಿದರು.
ಮುರಿಯದ ಈ ಜೋಡಿ ಮೂರನೇ ವಿಕೆಟ್ ಕಳೆದುಕೊಳ್ಳುವಷ್ಟರಲ್ಲಿ 37. 5 ಓವರ್ಗಳಲ್ಲಿ 291ರನ್ಗಳಿಕೆ ಮಾಡಿತು. 144ರನ್ಗಳಿಕೆ ಮಾಡಿದ ವೇಳೆ ರಘುವಂಶಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಮತ್ತಷ್ಟು ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಾ ಬಾವಾ ಕೇವಲ 108 ಎಸೆತಗಳಲ್ಲಿ 8 ಸಿಕ್ಸರ್, 14 ಬೌಂಡರಿ ಸೇರಿದಂತೆ ಅಜೇಯ 162ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ತಾಂಬೆ 15ರನ್, ದಿನೇಶ್ 22 ರನ್ ಹಾಗೂ ಗೌತಮ್ ಅಜೇಯ 12ರನ್ಗಳಿಕೆ ಮಾಡಿದರು.