ಕರ್ನಾಟಕ

karnataka

ETV Bharat / sports

U19 ವಿಶ್ವಕಪ್.. ಹಲವು ಸವಾಲುಗಳನ್ನು ಮೀರಿ ಫೈನಲ್ ತಲುಪಿರುವ ಯುವ ಪಡೆ ಬೆಂಬಲಿಸಿ : ಜಯ್ ಶಾ - ಭಾರತ vs ಇಂಗ್ಲೆಂಡ್​ ವಿಶ್ವಕಪ್ ಫೈನಲ್

ಭಾರತ ತಂಡ ಶನಿವಾರ ಸರ್​ ವಿವಿಯನ್​ ರಿಚರ್ಡ್ಸ್ ಸ್ಟೇಡಿಯಂನಲ್ಲಿ ​ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿವೆ. ಈ ಪಂದ್ಯದಲ್ಲಿ ವಿಜಯ ಸಾಧಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿ ಎಂದು ಜಯ್​ ಶಾ ಭಾರತ ಕಿರಿಯರ ತಂಡಕ್ಕೆ ಟ್ವಿಟರ್​ ಮೂಲಕ ಶುಭಾಶಯ ಕೋರಿದ್ದಾರೆ..

U-19 World cup final
ಅಂಡರ್ 19 ವಿಶ್ವಕಪ್ ಫೈನಲ್

By

Published : Feb 5, 2022, 4:38 PM IST

ನವದೆಹಲಿ: ಅಂಡರ್​-19 ವಿಶ್ವಕಪ್​ನಲ್ಲಿ ಭಾರತ ತಂಡ ಹಲವು ಸವಾಲುಗಳ ಹೊರೆತಾಗಿಯೂ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತೀಯರೆಲ್ಲರೂ ಅವರ ಬೆನ್ನಿಗೆ ನಿಂತು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಭಾರತ ತಂಡ ಶನಿವಾರ ಸರ್​ ವಿವಿಯನ್​ ರಿಚರ್ಡ್ಸ್ ಸ್ಟೇಡಿಯಂನಲ್ಲಿ ​ನಡೆಯಲಿರುವ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ತಲುಪಿವೆ.

ಈ ಪಂದ್ಯದಲ್ಲಿ ವಿಜಯ ಸಾಧಿಸಿ ಪ್ರಶಸ್ತಿಯನ್ನು ಎತ್ತಿ ಹಿಡಿಯಲಿ ಎಂದು ಜಯ್​ ಶಾ ಭಾರತ ಕಿರಿಯರ ತಂಡಕ್ಕೆ ಟ್ವಿಟರ್​ ಮೂಲಕ ಶುಭಾಶಯ ಕೋರಿದ್ದಾರೆ.

"ನೀಲಿ ಜರ್ಸಿಯಲ್ಲಿ ಹುಡುಗರು ಅಸಂಖ್ಯಾತ ಸವಾಲುಗಳ ಹೊರತಾಗಿಯೂ ಅಂಡರ್-19 ವಿಶ್ವಕಪ್​ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದಾರೆ. ಅವರು ಕೋವಿಡ್​-19 ಹೊಡೆತಕ್ಕೆ ಸಿಲುಕಿದರು.

ಆದರೆ, ಕಠಿಣ ಹೋರಾಟ ನೀಡಿ ಕಮ್​ಬ್ಯಾಕ್ ಮಾಡಿದರು. ಅವರಿಗೆ ಸಕಾರಾತ್ಮಕ ಭಾವನೆಯೊಂದಿಗೆ ಶುಭ ಕೋರುತ್ತಿದ್ದು, ಇಂದು ಫೈನಲ್​ನಲ್ಲಿ ನಾವೆಲ್ಲರೂ ಅವರ ಬೆನ್ನಿಗೆ ನಿಂತು ಬೆಂಬಲಿಸೋಣ. ಆಲ್​ ದಿ ಬೆಸ್ಟ್​ ಚಾಂಪಿಯನ್ಸ್" ಎಂದು ಜಯ್ ಶಾ ಟ್ವೀಟ್​ ಮಾಡಿದ್ದಾರೆ.

ಇವರ ಜೊತೆಗೆ ಭಾರತ ತಂಡದ ಆರಂಭಿಕ ಬ್ಯಾಟರ್​ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್​ ಮತ್ತು ಕೆ ಎಲ್ ರಾಹುಲ್ ಸೇರಿದಂತೆ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರ್​ಗಳು ಯಂಗ್​ ಟೈಗರ್ಸ್​ಗೆ ಶುಭಕೋರಿದ್ದಾರೆ.

ಇದನ್ನೂ ಓದಿ:ಕುಲ್ದೀಪ್​-ಚಹಲ್​ರನ್ನು ಒಟ್ಟಿಗೆ ಆಡಿಸಬೇಕೆಂಬುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ

ABOUT THE AUTHOR

...view details