ದುಬೈ:ಮುಂಬರುವ ವಿಶ್ವಕಪ್ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಅಂಡರ್ 19 ಏಷ್ಯಾಕಪ್ ಟೂರ್ನಮೆಂಟ್ನಲ್ಲಿ ಭಾರತ ಕಿರಿಯರ ತಂಡ ಶುಭಾರಂಭ ಮಾಡಿದೆ. ಗುರುವಾರ ನಡೆದ ಯುಎಇ ವಿರುದ್ಧದ ಪಂದ್ಯದಲ್ಲಿ 154 ರನ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 282 ರನ್ಗಳಿಸಿತ್ತು. ಆರಂಭಿಕ ಬ್ಯಾಟರ್ ಹರ್ನೂರ್ ಸಿಂಗ್ 130 ಎಸೆತಗಳಲ್ಲಿ 11 ಬೌಂಡರಿ ಸಹಿತ 120, ನಾಯಕ ಯಶ್ ಧುಲ್ 68 ಎಸೆತಗಳಲ್ಲಿ 63, ಶೈಕ್ ರಶೀದ್ 35, ರಾಜವರ್ಧನ್ ಹಂಗರ್ಗೆಕರ್ ಕೇವಲ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 48 ರನ್ ಸಿಡಿಸಿದರು.