ಹೈದರಾಬಾದ್: ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನ 50ನೇ ಶತಕ ಸಿಡಿಸಿ ಸಂಭ್ರಮಿಸಿದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐತಿಹಾಸಿಕ ಪಂದ್ಯಕ್ಕೆ ಪತ್ನಿ ಅನುಷ್ಕಾ ಶರ್ಮಾ ಕೂಡಾ ಸಾಕ್ಷಿಯಾಗಿದ್ದರು. ತಮ್ಮ ಪತಿಯ ಅಸಾಮಾನ್ಯ ಸಾಧನೆಯನ್ನು ವಿಶೇಷ ಉತ್ಸಾಹ ಮತ್ತು ಅಪಾರ ಸಂತೋಷದಿಂದ ಅವರು ಕಣ್ತುಂಬಿಕೊಂಡರು. ಜೊತೆಗೆ, ಸ್ಟೇಡಿಯಂನಲ್ಲಿಯೇ ವಿರಾಟ್‌ಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ಇದೀಗ ಇನ್ಸ್ಸ್ಟಾಗ್ರಾಮ್ನಲ್ಲಿ ವಿಶೇಷ ಪೋಸ್ಟ್ವೊಂದನ್ನು ಬರೆದಿದ್ದಾರೆ.
ಅನುಷ್ಕಾ ಶರ್ಮಾ ಇನ್ಸ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿಯನ್ನು, 'ದೇವರ ಮಗು' ಎಂದು ಕರೆದಿದ್ದಾರೆ. "ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಆಶೀರ್ವಾದ ಲಭಿಸಿರುವ ಜೊತೆಗೆ ವಿರಾಟ್ ಪ್ರೀತಿ ಕೂಡ ದೊರೆತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ವಿರಾಟ್ ಮತ್ತಷ್ಟು ಯಶಸ್ಸು ಗಳಿಸಿ, ಬೆಳವಣಿಗೆ ಹೊಂದಲಿ. ನಿಮ್ಮೊಂದಿಗೆ ಮತ್ತು ಆಟದೊಂದಿಗೆ ಯಾವಾಗಲೂ ಪ್ರಾಮಾಣಿಕವಾಗಿರಿ. ನೀವು ನಿಜವಾಗಿಯೂ ದೇವರ ಮಗು" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :Sachin Tendulkar: ನಿಮ್ಮ ಆಟ ಹೃದಯ ಮುಟ್ಟಿದೆ ; "ವಿರಾಟ" ಶತಕಕ್ಕೆ ತಲೆಬಾಗಿದ ಕ್ರಿಕೆಟ್ ದೇವರು