ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಲೋಕದ ಕರಾಳ ದಿನಕ್ಕೆ 7 ವರ್ಷ: ಪಿಲಿಫ್​ ಹ್ಯೂಸ್​ ನೆನೆದ ಕ್ರಿಕೆಟ್ ಅಭಿಮಾನಿಗಳು - ಆಸ್ಟ್ರೇಲಿಯಾ ಕ್ರಿಕೆಟರ್ ಫಿಲಿಫ್ ಹ್ಯೂಸ್​

2014 ನವೆಂಬರ್​ 25 ರಂದು ಆಸ್ಟ್ರೇಲಿಯಾದ ಶೆಫೀಲ್ಡ್​ ಪಂದ್ಯದಲ್ಲಿ ಸೌತ್​ ಆಸ್ಟ್ರೇಲಿಯಾ ತಂಡದ ಪರ ಹ್ಯೂಸ್​ ಬ್ಯಾಟಿಂಗ್ ಮಾಡುತ್ತಿದ್ದರು. ನ್ಯೂ ಸೌತ್ ವೇಲ್ಸ್​ನ ಸೀನ್ ಅಬೋಟ್​ ಎಸೆದ ಬೌನ್ಸರ್​ ತಲೆಯ ಹಿಂಬಾಗಕ್ಕೆ ಅಪ್ಪಳಿಸಿದ್ದರಿಂದ ಹ್ಯೂಸ್​ ಸ್ಥಳದಲ್ಲೇ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Tribute to Philip Hughes on his 7th death anniversary!
ಫಿಲಿಫ್ ಹ್ಯೂಸ್​ ನಿಧಕ್ಕೆ 7 ವರ್ಷ

By

Published : Nov 27, 2021, 1:56 PM IST

ಹೈದರಾಬಾದ್(ಡೆಸ್ಕ್​): ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್​ ತಾರೆ ಫಿಲಿಫ್​ ಹ್ಯೂಸ್​ ಮೈದಾನದಲ್ಲಿ ಬೌನ್ಸರ್​ ಏಟು ತಿಂದು ಮೃತಪಟ್ಟು ಇಂದಿಗೆ 7 ವರ್ಷಗಳು ತುಂಬಿದ್ದು, ಜಗತ್ತಿನಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಸಾಮಾಜಿಕ ಜಾಲಾತಾಣದ ಮೂಲಕ ಗೌರವ ಸಲ್ಲಿಸಿದ್ದಾರೆ.

2014, ನವೆಂಬರ್​ 25 ರಂದು ಆಸ್ಟ್ರೇಲಿಯಾದ ಶೆಫೀಲ್ಡ್​ ಪಂದ್ಯದಲ್ಲಿ ಸೌತ್​ ಆಸ್ಟ್ರೇಲಿಯಾ ತಂಡದ ಪರ ಹ್ಯೂಸ್​ ಬ್ಯಾಟಿಂಗ್ ಮಾಡುತ್ತಿದ್ದರು. ನ್ಯೂ ಸೌತ್ ವೇಲ್ಸ್​ನ ಸೀನ್ ಅಬೋಟ್​ ಎಸೆದ ಬೌನ್ಸರ್​ ತಲೆಯ ಹಿಂಭಾಗಕ್ಕೆ ಅಪ್ಪಳಿಸಿದ್ದರಿಂದ ಹ್ಯೂಸ್​ ಸ್ಥಳದಲ್ಲೇ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಫಿಲಿಫ್ ಹ್ಯೂಸ್​ ನಿಧಕ್ಕೆ 7 ವರ್ಷ

ಎರಡೂ ದಿನಗಳ ಕಾಲ ಸಿಡ್ನಿಯ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ಹ್ಯೂಸ್​ ಎರಡೂ ದಿನಗಳ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದರು. ಈ ಘಟನೆ ಕ್ರಿಕೆಟ್ ಲೋಕವನ್ನೇ ದಂಗಾಗಿಸಿತ್ತು. ಕೇವಲ 25 ವರ್ಷ ವಯಸ್ಸಿಗೆ ದಾರುಣ ಸಾವು ಕಂಡ ಪ್ರತಿಭಾವಂತ ಬ್ಯಾಟ್ಸ್​ಮನ್​ ಹ್ಯೂಸ್​ ಆಸ್ಟ್ರೇಲಿಯಾ ಪರ 25 ಟೆಸ್ಟ್​ ಹಾಗೂ 24 ಏಕದಿನ ಪಂದ್ಯಗಳನ್ನಾಡಿದ್ದರು.

ಫಿಲಿಫ್ ಹ್ಯೂಸ್​ ನಿಧಕ್ಕೆ 7 ವರ್ಷ

ಫಿಲಿಫ್ ಹ್ಯೂಸ್​ ದುರಂತ ಸಾವಿನ ನಂತರ ಕ್ರಿಕೆಟ್​ ಮೈದಾನದಲ್ಲಿ ಇಂತಹ ಘಟನೆ ಮರುಕಳಿಸಬಾರದೆಂದು ಕ್ರಿಕೆಟ್​ ಆಸ್ಟ್ರೇಲಿಯಾ, ಅತ್ಯುತ್ತಮ ಹೆಲ್ಮೆಟ್​, ನೆಕ್​ ಗಾರ್ಡ್​ಗಳನ್ನು ಕಡ್ಡಾಯಗೊಳಿಸಿದೆ. ಐಸಿಸಿ ಕೂಡ ಹೆಲ್ಮೆಟ್​ಗೆ ಚೆಂಡು ಬಡಿದರೆ ಆತನ ಬದಲಾಗಿ ಮತ್ತೊಬ್ಬ ಬ್ಯಾಟರ್ concussion substitute ಆಗಿ ​ ಬ್ಯಾಟಿಂಗ್​ ಮಾಡಲು ಅವಕಾಶ ನೀಡಿ ಹೊಸ ನಿಯಮವನ್ನೇ ಜಾರಿಗೆ ತಂದಿದೆ.

#63NotOut

ಕ್ರಿಕೆಟ್​ ಲೋಕದ ಕರಾಳದಿನವಾದ ಈ ದಿನವನ್ನು ವಿಶ್ವದಾದ್ಯಂತ ಕ್ರಿಕೆಟ್​ ಅಭಿಮಾನಿಗಳು ನೆನೆದಿದ್ದು, ಅಂದು ಹ್ಯೂಸ್​ 63 ರನ್​ಗಳಿಸಿ ನಾಟೌಟ್ ಆಗಿಯೇ ಕೊನೆಯುಸಿರೆಳೆದಿದ್ದರಿಂದ ಟ್ವಿಟರ್​ನಲ್ಲಿ ವಿಶ್ವದ ಹಲವಾರು ಕ್ರಿಕೆಟಿಗರು, ಕ್ರಿಕೆಟ್​ ಬೋರ್ಡ್​ಗಳು ಮತ್ತು ಅಭಿಮಾನಿಗಳು ಹ್ಯೂಸ್ ಫೋಟೋದ ಜೊತೆಗೆ #63NotOut ಎಂದು ಟ್ಯಾಗ್ ಮಾಡಿ ದಿವಂಗತ ಕ್ರಿಕೆಟಿಗನಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನು ಓದಿ:ಮುಂಬೈ ಉಗ್ರರ ದಾಳಿಗೆ 13 ವರ್ಷ: 'ಈ ದಿನವನ್ನೆಂದಿಗೂ ಮರೆಯಲಾರೆವು'- ಕೊಹ್ಲಿ ಸೇರಿದಂತೆ ಕ್ರಿಕೆಟಿಗರಿಂದ ಸ್ಮರಣೆ

ABOUT THE AUTHOR

...view details