ಲಂಡನ್:ಐಪಿಎಲ್ನಲ್ಲಿ ಹರಾಜಗಾದೆ ನಿರಾಸೆಗೊಳಗಾಗಿದ್ದ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್, ಐಪಿಎಲ್ ಮಾದರಿಯಲ್ಲೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಬಿರುಸಿನ ಬ್ಯಾಟ್ ಬೀಸಿ ದಾಖಲೆ ಬರೆದಿದ್ದಾರೆ. ಇಲ್ಲಿಯ ಓವೆಲ್ ಮೈದಾನದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ವೇಗವಾಗಿ ಬ್ಯಾಟ್ಮಾಡಿ ಭಾರತದ ಬ್ಯಾಟರ್ ರಿಷಭ್ ಪಂತ್ ಅವರ ಟೆಸ್ಟ್ನ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲೆಯನ್ನು ಹೆಡ್ ಮುರಿದಿದ್ದಾರೆ.
ಮೊದಲದಿನದಾಟದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 146 ರನ್ಗಳನ್ನು ಕಲೆ ಹಾಕಿ ಅಜೇಯರಾಗಿ ಕ್ರೀಸ್ನಲ್ಲಿ ಉಳಿದಿದ್ದಾರೆ. ಮತ್ತೊಂದೆಡೆ ಸ್ಟೀವ್ ಸ್ಮಿತ್ ಕೂಡ (ಅಜೇಯ 95) ರನ್ ಕಲೆಹಾಕದ್ದಾರೆ. ಇಬ್ಬರ ಜೋಡಿ 4ನೇ ವಿಕೆಟ್ಗೆ ಮುರಿಯದ 251 ರನ್‌ಗಳ ಜೊತೆಯಾಟವಾಡಿದ್ದಾರೆ. ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
ಈ ಬಗ್ಗೆ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಪ್ರತಿಕ್ರಿಯೆ ನೀಡಿದ್ದು, ಸ್ಟೀವ್ ಸ್ಮಿತ್ ಅವರೊಟ್ಟಿಗೆ ಬ್ಯಾಟಿಂಗ್ ಮಾಡಲು ಹೆಚ್ಚಾಗಿ ಇಷ್ಟಪಡುತ್ತೇನೆ. ಏಕೆಂದರೆ ಇದು ನನ್ನ ಅತ್ಯುತ್ತಮ ಪ್ರದರ್ಶನಕ್ಕೆ ಸಹಾಯ ಮಾಡಲಿದೆ. ಸ್ಮೀತ್ ಅವರೊಂದಿಗಿನ ಬ್ಯಾಟಿಂಗ್ ಅನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಬಹುಶಃ ನಮ್ಮ ಅತ್ಯುತ್ತಮ ಆಟಗಾರರು ಹೌದು. ಹಾಗಾಗಿ ನಾನು ಯಾವಾಗಲೂ ಅವರೊಂದಿಗೆ ಆಡಲು ಸಿದ್ಧನಿರುತ್ತೇನೆ ಎಂದು ಹೆಡ್ ಹೇಳಿದರು.
WTC 2021-23ರಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್‌ಗಳು
ಟ್ರಾವಿಸ್ ಹೆಡ್ - 81.91
ರಿಷಭ್ ಪಂತ್ - 80.81
ಜಾನಿ ಬೈರ್‌ಸ್ಟೋ - 68.90
ಒಲ್ಲಿ ಪೋಪ್ - 66.04
ಇಂಗ್ಲೆಂಡನಲ್ಲಿ ಅತ್ಯಧಿಕ ಜೊತೆಯಾಟ
388 - ಡಾನ್ ಬ್ರಾಡ್ಮನ್ ಮತ್ತು ಬಿಲ್ ಪೊನ್ಸ್‌ಫೋರ್ಡ್, ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆ ಮೈದಾನ, 1934
251 - ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಭಾರತ ವಿರುದ್ಧ ದಿ ಓವಲ್ ಮೈದಾನ, 2023
243 - ಡಾನ್ ಬ್ರಾಡ್ಮನ್ ಮತ್ತು ಆರ್ಚೀ ಜಾಕ್ಸನ್ ಇಂಗ್ಲೆಂಡ್ ವಿರುದ್ಧ ದಿ ಓವಲ್ ಮೈದಾನ, 1930
221 - ಸಿಡ್ನಿ ಗ್ರೆಗೊರಿ ಮತ್ತು ಹ್ಯಾರಿ ಟ್ರಾಟ್ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನ, 1896