ಕರ್ನಾಟಕ

karnataka

ETV Bharat / sports

ಭಾರತ ತಂಡದಲ್ಲಿ ಅವಕಾಶವಿಲ್ಲ ಎನ್ನುವುದು ಖಚಿತ, ರಣಜಿಯಿಂದ ಒಬ್ಬಬ್ಬರಾಗಿ ಹೊರ ಬರುತ್ತಿರುವ ಸ್ಟಾರ್ ಕ್ರಿಕೆಟಿಗರು​! - ರೋಹಿತ್ ಶರ್ಮಾ

ಮೊಹಾಲಿಯಲ್ಲಿ ಮಾರ್ಚ್​ 4ರಿಂದ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ಆರಂಭವಾಗಲಿದೆ. ಈ ಸರಣಿ ಭಾರತ ತಂಡಕ್ಕೆ ವೃದ್ಧಿಮಾನ್ ಸಹಾ ಅವರನ್ನು ಆಯ್ಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದರರ್ಥ 37 ವರ್ಷದ ವಿಕೆಟ್​ ಕೀಪರ್​ ಭಾರತದ ಭವಿಷ್ಯದ ವಿಕೆಟ್​ ಕೀಪರ್ ಅಲ್ಲ ಎನ್ನುವುದು ಖಚಿತವಾಗಿದೆ.

India test team
ಭಾರತ ಟೆಸ್ಟ್​ ತಂಡ, ರಣಜಿ ಟ್ರೋಪಿ

By

Published : Feb 9, 2022, 8:47 PM IST

ಮುಂಬೈ: ಮುಂಬರುವ ಶ್ರೀಲಂಕಾ ವಿರುದ್ದದ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ತಂಡದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಟೀಮ್ ಮ್ಯಾನೇಜ್​ಮೆಂಟ್​ ತಿಳಿಸುತ್ತಿದ್ದಂತೆ ಹಿರಿಯ ವಿಕೆಟ್​ ಕೀಪರ್​ ಬೆಂಗಾಲ್​ ರಣಜಿ ತಂಡದಿಂದ ಹೊರಬಂದಿದ್ದಾರೆ.

ಮೊಹಾಲಿಯಲ್ಲಿ ಮಾರ್ಚ್​ 4ರಿಂದ ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ ಆರಂಭವಾಗಲಿದೆ. ಈ ಸರಣಿ ಭಾರತ ತಂಡಕ್ಕೆ ವೃದ್ಧಿಮಾನ್ ಸಹಾ ಅವರನ್ನು ಆಯ್ಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದರರ್ಥ 37 ವರ್ಷದ ವಿಕೆಟ್​ ಕೀಪರ್​ ಭಾರತದ ಭವಿಷ್ಯದ ವಿಕೆಟ್​ ಕೀಪರ್ ಅಲ್ಲ ಎನ್ನುವುದು ಖಚಿತವಾಗಿದೆ.

ಈಗಾಗಲೆ ರಿಷಭ್ ಪಂತ್​ ಮುಂದಿನ ಕೆಲವು ವರ್ಷಗಳ ಕಾಲ ಭಾರತದ ಖಾಯಂ ವಿಕೆಟ್ ಕೀಪರ್​ ಆಗಲಿದ್ದಾರೆ ಎನ್ನುವುದು ಖಚಿತವಾಗಿದೆ. ಕೋನಾ ಭರತ್​ ಕೂಡ ಕಾನ್ಪುರ ಟೆಸ್ಟ್​ನಲ್ಲಿ ಅದ್ಭುತವಾದ ವಿಕೆಟ್ ಕೀಪಿಂಗ್ ಕೌಶಲ್ಯ ಪ್ರದರ್ಶಿಸಿರುವುದರಿಂದ ಅವರು ಮೀಸಲು ವಿಕೆಟ್ ಕೀಪರ್​ ಆಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ದೆಹಲಿ ತಂಡಕ್ಕೆ ಸಿಗದ ಇಶಾಂತ್ ಶರ್ಮಾ:ಭಾರತದ ಹಿರಿಯ ವೇಗಿ ಇಶಾಂತ್ ಶರ್ಮಾ ಕೂಡ ಈ ವರ್ಷದ ರಣಜಿ ಟ್ರೋಪಿಯಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ 105 ಟೆಸ್ಟ್ ಪಂದ್ಯಗಳನ್ನಾಡಿರುವ ಇಶಾಂತ್​ 311 ವಿಕೆಟ್ ಪಡೆದು ತಂಡದ ಅನುಭವಿ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ದೆಹಲಿ ರಣಜಿ ತಂಡದಿಂದ ಹೊರಬಂದಿರುವುದರಿಂದ ಅವರ ಅಂತಾರಾಷ್ಟ್ರೀಯ ಭವಿಷ್ಯ ಕೂಡ ಅಂತ್ಯವಾಗಿದಿಯೇ ಎನ್ನಲಾಗುತ್ತಿದೆ.

ಬುಧವಾರ ಡೆಲ್ಲಿ ಮತ್ತು ಡಿಸ್ಟ್ರಿಕ್ಸ್​ ಕ್ರಿಕೆಟ್​ ಅಸೋಸಿಯೇಷನ್(ಡಿಡಿಸಿಎ) ಆಯ್ಕೆ ಸಮಿತಿ ರಣಜಿ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡುವುದಕ್ಕೆ ಸಭೆ ಸೇರಿತ್ತು. ಈ ಸಂದರ್ಭದಲ್ಲಿ ಆಯ್ಕೆಗಾರರು ಮತ್ತು ಅಧಿಕಾರಿಗಳು ಇಶಾಂತ್​ ಶರ್ಮಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರಾದರೂ, ಸಂಜೆವರೆಗೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಭಾರತದವನಾಗಿದ್ದರೆ ನನಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗುತ್ತಿರಲಿಲ್ಲವೇನೋ: ಎಬಿ ಡಿ ವಿಲಿಯರ್ಸ್​

"ಅವರು ಯಾವಾಗ ಆಡಬೇಕೆಂದು ಬಯಸಿದರೂ, ಅವರು ದೆಹಲಿಯ ದಂತಕಥೆಯಾಗಿರುವುದರಿಂದ ರಣಜಿ ತಂಡಕ್ಕೆ ಸೇರಿಸಲಾಗುತ್ತದೆ. ಆದರೆ, ಅವರು ಕಳೆದ ವಾರದಿಂದ ಅಜ್ಞಾತವಾಸದಲ್ಲಿದ್ದು, ಅವರಿಗೆಗೆ ಏನಾಗಿದೆ ಎಂದು ನಮಗೆ ತಿಳಿದಿಲ್ಲ, ಅವರು ರಣಜಿ ತಂಡದ ಅಭ್ಯಾಸದ ಸೆಷನ್​ಗಳಿಗೂ ಬಂದಿಲ್ಲ. ಹಾಗಾಗಿ ಅವರ ಮನಸ್ಸಿನಲ್ಲಿ ಏನಿದೆ ಎಂದು ನಮಗೆ ತಿಳಿದಿಲ್ಲ," ಎಂದು ಹಿರಿಯ DDCA ಆಯ್ಕೆದಾರರು ಪಿಟಿಐಗೆ ಹೇಳಿದ್ದಾರೆ.

ಒಂದು ವೇಳೆ ಭಾರತದ ಮ್ಯಾನೇಜ್​ಮೆಂಟ್​ ಏನಾದರೂ ಹೇಳಿದ್ದು, ಅದು ಅವರ ಮನಸ್ಥಿತಿಯ ಬದಲಾವಣೆಗೆ ಕಾರಣವಾಗಿರಬಹುದೇನೊ, ನಮಗೆ ಗೊತ್ತಿಲ್ಲ, ಸಂಪೂರ್ಣ ಗೊಂದಲಗಳಿವೆ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್​ ಟಾಪ್ 3 ವೇಗದ ಬೌಲರ್​ಗಳಾಗಿದ್ದಾರೆ, ಶಾರ್ದೂಲ್ ಆಲ್​ರೌಂಡರ್​ ವಿಭಾಗದಲ್ಲಿದ್ದರೆ, ಉಮೇಶ್​ ಯಾದವ್​ 5ನೇ ಬೌಲರ್​ ಆಗಿದ್ದಾರೆ.

ಹಾಗಾಗಿ ಇಶಾಂತ್​ ಅವರನ್ನು ಆಯ್ಕೆ ಮಾಡಿ ಬೆಂಚ್​ ಕಾಯಿಸುವುದು ಅಥವಾ ಡ್ರಿಂಕ್ಸ್​ ತೆಗೆದುಕೊಂಡು ಹೋಗುವುದಕ್ಕೆ ಮೀಸಲಿಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೊಸ ಮ್ಯಾನೇಜ್​ಮೆಂಟ್​ ಭಾವಿಸಿರುವ ಸಾಧ್ಯತೆ ಕೂಡ ಇದೆ. ಇನ್ನು ಇಶಾನ್ ಪೊರೆಲ್​, ಪ್ರಸಿಧ್ ಕೃಷ್ಣ ಮತ್ತು ಆವೇಶ್ ಖಾನ್ ಅಂತಹ ಯುವ ಪ್ರತಿಭೆಗಳ ಅನಾವರಣ ಮಾಡಲು ಕೂಡ ಮ್ಯಾನೇಜ್​ಮೆಂಟ್​ ಬಯಸಿರಬಹುದು.

ರಹಾನೆ - ಪೂಜಾರ ಸಮಯವೂ ಮುಗಿಯುತ್ತಿದೆ:ಭಾರತ ತಂಡದಲ್ಲಿರುವವರಲ್ಲಿ ಅತಿ ಹೆಚ್ಚು ಅವಕಾಶ ಪಡೆಯುತ್ತಿರುವವರೆಂದರೆ ರಹಾನೆ ಮತ್ತು ಪೂಜಾರ. ಕಳೆದ 2 ವರ್ಷಗಳಲ್ಲಿ ಅವರಿಬ್ಬರು ರನ್​ಗಳಿಸಲಾಗದೆ ಪರದಾಡುತ್ತಿದ್ದರೂ ಅವರ ಬೆನ್ನಿಗೆ ನಿಲ್ಲಲಾಗುತ್ತಿತ್ತು. ಆದರೆ, ಯುವ ಆಟಗಾರರಾದ ಹನುಮ ವಿಹಾರಿ(3ನೇ ಕ್ರಮಾಂಕ), ಶುಬ್ಮನ್​ ಗಿಲ್(5)​ ಅವಕಾಶಕ್ಕಾಗಿ ಕಾಯುತ್ತಿರುವುದರಿಂದ ಹಿರಿಯ ಬ್ಯಾಟರ್​ಗಳಿಗೂ ಕೊನೆಯ ಅವಕಾಶಗಳು ಮಾತ್ರ ಬಾಕಿ ಉಳಿದಿರಬಹುದು. ಅವರ ಭವಿಷ್ಯ ಮ್ಯಾನೇಜ್​ಮೆಂಟ್​ ಮತ್ತು ಹೊಸ ನಾಯಕನ ಮನಸ್ಥಿತಿಯ ಮೇಲೆ ನಿಂತಿದೆ.

ರಹಾನೆ ಮತ್ತು ಪೂಜಾರ ಪ್ರಸ್ತುತ ಅವರ ರಾಜ್ಯ ತಂಡಗಳಾದ ಮುಂಬೈ ಮತ್ತು ಸೌರಾಷ್ಟ್ರ ತಂಡದಲ್ಲಿದ್ದಾರೆ, ಅವರು ಭಾರತ ತಂಡಕ್ಕೆ ಮರಳಬೇಕೆನ್ನುವ ಉದ್ದೇಶದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಬೇಕೆಂದರೆ ರಣಜಿಯಲ್ಲಿ ದೊಡ್ಡ ಮೊತ್ತದ ಆಟ ಹೊರಬರಬೇಕಿದೆ.

ಇದನ್ನೂ ಓದಿ:ವಿಶೇಷ ಮೈಲುಗಲ್ಲಿನ ಪಂದ್ಯದಲ್ಲಿ ಮತ್ತೊಮ್ಮೆ ವಿಫಲರಾದ ವಿರಾಟ್​ ಕೊಹ್ಲಿ

ABOUT THE AUTHOR

...view details