ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿ ಆರಂಭಗೊಳ್ಳಲು ಕ್ಷಣಗಣನೆ ಆರಂಭಗೊಂಡಿದ್ದು, ಮಾರ್ಚ್ 26ರಿಂದ ಹೊಡಿಬಡಿ ಆಟಕ್ಕೆ ಚಾಲನೆ ಸಿಗಲಿದೆ. ಈ ಸಲದ ಐಪಿಎಲ್ ಭಾರತದಲ್ಲೇ ನಡೆಯಲಿರುವ ಕಾರಣ ಕ್ರೀಡಾಭಿಮಾನಿಗಳು ಮೈದಾನಕ್ಕೆ ತೆರಳಿ ನೆಚ್ಚಿನ ಕ್ರಿಕೆಟಿಗರ ಆಟ ಕಣ್ತುಂಬಿಕೊಳ್ಳಬಹುದು.
ಕೇವರ ಎರಡ್ಮೂರು ಓವರ್ಗಳಲ್ಲಿ ಪಂದ್ಯದ ಗತಿ ಬದಲಿಸುವ ಆಟಗಾರರು ಪ್ರತಿಯೊಂದು ತಂಡದಲ್ಲೂ ಇರುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಕ್ಸರ್ ಸಿಡಿಸುವ ಪ್ಲೇಯರ್ಸ್ಗೆ ತುಸು ಹೆಚ್ಚಿನ ಬೇಡಿಕೆ. ಈ ಹಿಂದೆ ಕೂಡ ಒಂದೇ ಇನ್ನಿಂಗ್ಸ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟಿರುವ ಅನೇಕ ಉದಾಹರಣೆಗಳಿವೆ.
ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್ ಈಗಾಗಲೇ ಇಂತಹ ಸಾಧನೆಗೆ ಪಾತ್ರರಾಗಿದ್ದು, ಈ ಸಲದ ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಕೀರನ್ ಪೊಲಾರ್ಡ್, ರಿಷಭ್ ಪಂತ್, ಹೋಲ್ಡರ್ ಸೇರಿದಂತೆ ಅನೇಕ ಪ್ಲೇಯರ್ಸ್ ಇದೇ ರೀತಿಯ ಸಾಧನೆ ತೋರುವ ಸಾಧ್ಯತೆ ಇದೆ. ಹಾಗಾದ್ರೆ ಈ ಹಿಂದಿನ ಆವೃತ್ತಿಗಳಲ್ಲಿ ಯಾರು ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ಕ್ರಿಸ್ ಗೇಲ್:ಚುಟುಕು ಕದನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕ್ರಿಸ್ ಗೇಲ್ 2013ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 17 ಸಿಕ್ಸರ್ ಬಾರಿಸಿದ್ದರು. ಕೇವಲ 66 ಎಸೆತಗಳಲ್ಲಿ ಅಜೇಯ 175ರನ್ಗಳಿಕೆ ಮಾಡಿದ್ದ ಈ ಪ್ಲೇಯರ್ ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಬರೆದಿದ್ದರು. ಈ ಪಂದ್ಯವನ್ನು ಆರ್ಸಿಬಿ 130ರನ್ಗಳ ಅಂತರದಿಂದ ಗೆದ್ದಿತ್ತು.