ಸಿಡ್ನಿ:ಸತತ ಬಯೋಬಬಲ್ನಿಂದ ಬಳಲಿರುವ ಆಸ್ಟ್ರೇಲಿಯಾದ ಟಾಪ್ ಕ್ರಿಕೆಟಿಗರು, ಮುಂಬರುವ ವಿಂಡೀಸ್ ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಪ್ಯಾಟ್ ಕಮ್ಮಿನ್ಸ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೇನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋಯ್ನಿಸ್, ಕೇನ್ ರಿಚರ್ಡ್ಸನ್ ಮತ್ತು ಜೇ ರಿಚರ್ಡ್ಸನ್ ಆಸ್ಟ್ರೇಲಿಯಾ ವೈಟ್ಬಾಲ್ ತಂಡದಿಂದ ಹೊರ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿವೆ.
ಜುಲೈ ಮತ್ತು ಆಗಸ್ಟ್ ತಿಂಗಳ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ 6 ಹೆಚ್ಚುವರಿ ಆಟಗಾರರು ಸೇರಿದಂತೆ 23 ಸದಸ್ಯರ ತಂಡವನ್ನು ಘೋಷಿಸಿದ ನಂತರ, ಸ್ಟಾರ್ ಆಟಗಾರರು ಪ್ರವಾಸದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ವಿವಿಧ ಕ್ರಿಕೆಟಿಂಗ್ ಬಯೋಬಬಲ್ಸ್ಗಳಲ್ಲಿ ಸಾಕಷ್ಟು ಅವಧಿಗಳನ್ನು ಕಳೆದ ನಂತರ ಏಳು ಸ್ಟಾರ್ ಆಟಗಾರರು ವಿಂಡೀಸ್ ಪ್ರವಾಸದಿಂದ ಹೊರ ಬರುವ ಸಾಧ್ಯತೆಯಿದೆ ಎಂದು ಆಸ್ಟ್ರೇಲಿಯಾದ ಪ್ರಸಿದ್ಧ ನೈನ್ ಮೀಡಿಯಾ ಬುಧವಾರ ವರದಿ ಮಾಡಿದೆ.