ಕರ್ನಾಟಕ

karnataka

2025ರ ಚಾಂಪಿಯನ್ಸ್ ಟ್ರೋಫಿಗೆ ವಿಶ್ವಕಪ್​ ಮಾನದಂಡ: ಹಲವು ತಂಡಗಳಿಗೆ ಅಚ್ಚರಿ ಮೂಡಿಸಿದ ಐಸಿಸಿ ನಿರ್ಧಾರ

By ETV Bharat Karnataka Team

Published : Oct 29, 2023, 9:23 PM IST

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮಾನ್ಯತೆ ಬಗ್ಗೆ ಬಾಂಗ್ಲಾ ನಾಯಕ ಶಕೀಬ್ ಹಂಚಿಕೊಂಡ ಮಾಹಿತಿಯಿಂದ ಹೊಸ ನಿಯಮ ಬೆಳಕಿಗೆ ಬಂದಿದೆ.

2025 ICC Champions Trophy
2025 ICC Champions Trophy

ನವದೆಹಲಿ: 2013 ಮತ್ತು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾಗವಹಿಸುವಿಕೆಗೆ ಅನುಸರಿಸಿದ್ದ ಮಾನದಂಡವನ್ನು ಐಸಿಸಿ 2025ರ ಟೂರ್ನಿಗೆ ಬದಲಾಯಿಸಿದೆ. ಇದು ಈಗ ಹಲವು ಕ್ರಿಕೆಟ್​ ಮಂಡಳಿಗಳ ಬೇಸರಕ್ಕೆ ಕಾರಣವಾದರೆ, ಇನ್ನೂ ಕೆಲ ಮಂಡಳಿಗಳಿಗೆ ಸಂತಸ ತರಲಿದೆ. 2025ಕ್ಕೆ ಪಾಕಿಸ್ತಾನದ ಆಥಿತ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.

2013 ಮತ್ತು 2017 ರಲ್ಲಿ ಐಸಿಸಿ ನೀಡುವ ಶ್ರೇಯಾಂಕದಲ್ಲಿ 8 ಸ್ಥಾನಗಳನ್ನು ಪಡೆದುಕೊಂಡ ತಂಡಗಳು ಎರಡು ಗುಂಪಾಗಿ ಲೀಗ್​ನಲ್ಲಿ ಸ್ಪರ್ಧಿಸುತ್ತಿದ್ದವು. ಮುಂದಿನ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಈ ನಿಯಮವನ್ನು ಬದಲಾಯಿಸಲಾಗಿದೆ. 2017ರ ನಂತರ 2019 ಮತ್ತು 21ರಲ್ಲಿ ಟೆಸ್ಟ್​ ಚಾಂಪಿಯನ್​ ಶಿಪ್​ ಪರಿಚಯಿಸಿದ್ದರಿಂದ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಿರಲಿಲ್ಲ. ಆದರೆ 2021 ರಲ್ಲಿ ಮತ್ತೆ ಚಾಂಪಿಯನ್ಸ್ ಟ್ರೋಫಿಯನ್ನು ಮರಳಿತರುವ ಚಿಂತನೆ ಮಾಡಲಾಯಿತು. ಆಗಲೇ ಐಸಿಸಿ ಹೊಸ ನಿಯವನ್ನು ಪರಿಚಯಿಸಿತ್ತು ಎನ್ನಲಾಗಿದೆ. ಆದರೆ ಆ ಮಹತ್ವ ಬದಲಾವಣೆ ಹೆಚ್ಚಿನ ತಂಡಗಳಿಗೆ ತಿಳಿದೇ ಇಲ್ಲ ಎಂಬಂತೆ ತೋರುತ್ತದೆ.

2025ರ ಚಾಂಪಿಯನ್ಸ್ ಟ್ರೋಫಿಗೆ ಪ್ರಸ್ತುತ ನಡೆಯುತ್ತಿರುವ 2023ರ ವಿಶ್ವಕಪ್​ನ ಲೀಗ್​ ಹಂತದ ಅಂಕಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಲೀಗ್ ಅಂತಿಮ ಆದ ನಂತರ ಟಾಪ್​ 7 ಸ್ಥಾನದಲ್ಲಿರುವ ತಂಡಗಳು ಮತ್ತು ಆತಿಥೇಯ ಪಾಕಿಸ್ತಾನ ಸ್ಪರ್ಧಿಸಲಿದೆ. ಈ ವಿಶ್ವಕಪ್​​ ಪಂದ್ಯಾವಳಿಯಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಇದೆ ಎಂದು ಅನೇಕರು ತಿಳಿದಿಲ್ಲ.

ಹೊಸ ಅರ್ಹತಾ ನಿಯಮಗಳನ್ನು ಅನುಸರಿಸಿ, ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ಮುಂಬರುವ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗೆ ಪ್ರವೇಶಿಸಲು ಸಾಧ್ಯವಾಗದ ಕಾರಣ ಭಾಗವಹಿಸುವುದಿಲ್ಲ. 2023ರ ಏಕದಿನ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಬಾಂಗ್ಲಾದೇಶ ಸೋತ ನಂತರ, ಶಕೀಬ್ ಅಲ್ ಹಸನ್ ಮಾಧ್ಯಮಗೋಷ್ಟಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದರು. ಆಗ ಹೊಸ ಅರ್ಹತಾ ನಿಯಮಗಳ ಸುದ್ದಿ ಬೆಳಕಿಗೆ ಬಂದಿದೆ.

ಶನಿವಾರ ನಡೆದ ಪಂದ್ಯದ ಪೂರ್ವಭಾವಿ ಮಾಧ್ಯಮಗೋಷ್ಟಿಯಲ್ಲಿ ಶಕೀಬ್ ಅಗ್ರ ಎಂಟರೊಳಗೆ ಸ್ಥಾನ ಪಡೆಯುವ ಮಹತ್ವದ ಕುರಿತು ಮಾತನಾಡಿದರು. "ನನ್ನ ಪ್ರಕಾರ, ಸೆಮಿ-ಫೈನಲ್ ಭರವಸೆ ಅಲ್ಲ" ಎಂದು ಹೇಳುವ ಮೂಲಕ ಏಳು ಸ್ಥಾನಗಳನ್ನು ಪಡೆದುಕೊಳ್ಳುವ ಪ್ರಯತ್ನದ ಬಗ್ಗೆ ಮಾತನಾಡಿದ್ದಾರೆ.

ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ಹೊಸ 2024-31 ವರೆಗಿನ ಪುರುಷರು ಮತ್ತು ಮಹಿಳೆಯರ ಟೂರ್ನಿಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಇದರಲ್ಲಿ 2025 ಮತ್ತು 2029 ರಲ್ಲಿ ಚಾಂಪಿಯನ್ಸ್ ಟ್ರೋಫಿಯ ಎರಡು ಹೊಸ ಆವೃತ್ತಿಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿಯು ಎಂಟು-ತಂಡಗಳ ಈವೆಂಟ್ ಆಗಿರುತ್ತದೆ "ಹಿಂದಿನ ಆವೃತ್ತಿ ರೀತಿಯಲ್ಲೇ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ಲೀಗ್​ ನಡೆಯಲಿದ್ದು, ಸೆಮಿ-ಫೈನಲ್ ಮತ್ತು ಫೈನಲ್‌ ಫಲಿತಾಂಶವಾಗಿ ಅನುಸರಿಸಲಾಗುತ್ತದೆ" ಎಂದು ಐಸಿಸಿ ಹೇಳಿದೆ. 2021 ರ ಐಸಿಸಿ ಸಭೆಗಳಲ್ಲಿ ಎಲ್ಲಾ ಈವೆಂಟ್‌ಗಳಿಗೆ ಅರ್ಹತಾ ಮಾರ್ಗಗಳನ್ನು ಚರ್ಚಿಸಲಾಗಿದೆ ಮತ್ತು ಅನುಮೋದಿಸಲಾಗಿದೆ ಎಂದು ಮಂಡಳಿಯ ಪೂರ್ಣ ಸದಸ್ಯರೊಬ್ಬರು ದೃಢಪಡಿಸಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ ಕ್ರಿಕೆಟ್​: ರೋಹಿತ್, ಸೂರ್ಯ ಜವಾಬ್ದಾರಿಯುತ ಇನ್ನಿಂಗ್ಸ್​.. ಆಂಗ್ಲರಿಗೆ 230 ರನ್​ ಗುರಿ

ABOUT THE AUTHOR

...view details