ಚೆನ್ನೈ: ನಾಯಕ ಮನೀಶ್ ಪಾಂಡೆ ಮತ್ತು ಕೆ. ಸಿದ್ಧಾರ್ಥ್ ಅವರು ಭರ್ಜರಿ ಶತಕಗಳ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಪಿಯ ತನ್ನ ಮೊದಲ ಪಂದ್ಯದ ಮೊದಲ ದಿನವೇ ರೈಲ್ವೇಸ್ ವಿರುದ್ಧ 5 ವಿಕೆಟ್ ಕಳೆದುಕೊಂಡು 392 ರನ್ಗಳ ಬೃಹತ್ ಮೊತ್ತ ಕಲೆಯಾಕಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಕರ್ನಾಟಕ ತಂಡ 50 ರನ್ಗಳಾಗುವಷ್ಟರಲ್ಲಿ ಆರಂಭಿಕರಾದ ಮಯಾಂಕ್ ಅಗರ್ವಾಲ್(16) ಮತ್ತು ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. 3ನೇ ವಿಕೆಟ್ಗೆ ಸಮರ್ಥ್ ಮತ್ತು ಸಿದ್ಧಾರ್ಥ್ 60 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಅನುಭವಿ ಸಮರ್ಥ್ 47 ರನ್ಗಳಿಸಿದ್ದ ವೇಳೆ ಅವಿನಾಶ್ ಯಾದವ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
267 ರನ್ಗಳ ಜೊತೆಯಾಟ ನೀಡಿದ ಮನೀಶ್ - ಸಿದ್ಧಾರ್ಥ್ ಜೋಡಿ:110ರನ್ಗಳಿಗೆ 3 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ಸಿದ್ಧಾರ್ಥ್ ಜೊತೆಗೂಡಿದ ನಾಯಕ ಮನೀಶ್ ಪಾಂಡೆ ರೈಲ್ವೇಶ್ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಟಿ-20 ಕ್ರಿಕೆಟ್ನಂತೆ ಬ್ಯಾಟಿಂಗ್ ಬೀಸಿದ ಮನೀಶ್ ಕೇವಲ 83 ಎಸೆತಗಳಲ್ಲೇ ತಮ್ಮ 10ನೇ ಪ್ರಥಮ ದರ್ಜೆ ಶತಕ ಬಾರಿಸಿದರು. ಒಟ್ಟಾರೆ 121 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 156 ರನ್ಗಳಿಸಿ ಔಟಾದರು.
ಸಿದ್ಧಾರ್ಥ್ 221 ಎಸೆತಗಳಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ ಅಜೇಯ 140 ರನ್ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ರೈಲ್ವೇಸ್ ಪರ ಶಿವಂ ಚೌದರಿ 22ಕ್ಕೆ2, ಯುವರಾಜ್ ಸಿಂಗ್ 52ಕ್ಕೆ1 ಮತ್ತು ಅವಿನಾಶ್ ಯಾದವ್ 132ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ರಣಜಿ ಟ್ರೋಫಿ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ U19 ಸ್ಟಾರ್ ಯಶ್ ಧುಲ್