ಟೋಕಿಯೋ: ಜುಲೈ 23ರಂದು ಟೋಕಿಯೋದಲ್ಲಿ ಒಲಿಂಪಿಕ್ಸ್ ಆರಂಭವಾಗಲಿದೆ. ಆದರೆ ಇಷ್ಟು ಒಲಿಂಪಿಕ್ಸ್ಗಳ ಹಾಗೆ ಈ ಒಲಿಂಪಿಕ್ಸ್ ಇರುವುದಿಲ್ಲ. ಕೊರೊನಾದಿಂದ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ಕ್ರೀಡಾಪಟುಗಳಿಗೆ ಆ್ಯಂಟಿ ಸೆಕ್ಸ್ ಬೆಡ್ ನೀಡಿರುವುದೂ ಕೂಡ ಎಲ್ಲರ ಆಸಕ್ತಿ ಕೆರಳಿಸುತ್ತಿದೆ.
ನೂರಾರು ದೇಶಗಳು ಈ ಕೂಟಲ್ಲಿ ಪಾಲ್ಗೊಳ್ಳುವುದರಿಂದ ಆತಿಥ್ಯವಹಿಸುವ ರಾಷ್ಟ ಕ್ರೀಡಾ ಗ್ರಾಮ(ಒಲಿಂಪಿಕ್ಸ್ ವಿಲೇಜ್)ವನ್ನು ನಿರ್ಮಿಸುತ್ತದೆ. ಕ್ರೀಡಾಕೂಟ ಮುಗುಯುವವರೆಗೂ ಎಲ್ಲಾ ಕ್ರೀಡಾಪಟುಗಳು ಇಲ್ಲೆ ನೆಲೆಸುತ್ತಾರೆ. ಹಾಗೆಯೇ ಟೋಕಿಯೋದಲ್ಲಿ ಈ ಬಾರಿ ಕ್ರೀಡಾ ಗ್ರಾಮ ನಿರ್ಮಿಸಲಾಗಿದೆ. ಆದರೆ ಕೊರೊನಾ ಪ್ರಭಾವದಿಂದ ಕೂಟ ಒಂದು ವರ್ಷ ಮುಂದೂಡಿದ್ದರಿಂದ ಪೀಠೋಪಕರಣಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಪ್ರತಿ ಆಥ್ಲೀಟ್ಗೆ ಆಯೋಜಕರು ಆ್ಯಂಟಿ ಸೆಕ್ಸ್ ಬೆಡ್ ನೀಡಿದ್ದಾರೆ.
ಸಾಮಾಜಿಕ ಅಂತರ ಕಾಪಾಡುವುದಕ್ಕೆ ಮತ್ತು ಕ್ರೀಡಾ ಗ್ರಾಮದಲ್ಲಿ ಶಿಸ್ತನ್ನು ಕಾಪಾಡುವ ದೃಷ್ಟಿಯಿಂದ ಆಯೋಜಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅಂದರೆ ಅಥ್ಲೀಟ್ಗಳು ಲೈಂಗಿಕ ಸಂಭೋಗ ಸೇರಿದಂತೆ ಯಾವುದೇ ಅನಗತ್ಯ ಸಾಮಾಜಿಕವಾಗಿ ಸೇರುವುದಕ್ಕೆ ಅಥವಾ ನಿಕಟ ಸಂವಾದದಲ್ಲಿ ತೊಡಗದಂತೆ ಕ್ರೀಡಾಪಟುಗಳನ್ನು ನಿಯಂತ್ರಿಸುವ ಉದ್ದೇಶವಾಗಿದೆ.
ಕಾರ್ಡ್ಬೋರ್ಡ್ಗಳಿಂದ ಮಾಡಿದ ಹಾಸಿಗೆ
ಈ ಆ್ಯಂಟಿ ಸೆಕ್ಸ್ ಬೆಡ್ಗಳನ್ನು ಕಾರ್ಡ್ಬೋರ್ಡ್ಗಳಿಂದ ಮಾಡಲ್ಪಟ್ಟಿದೆ. ಅಲ್ಲದೆ ಅದರ ಒಬ್ಬ ವ್ಯಕ್ತಿ ಮಾತ್ರ ಮಲಗಲು ಸಾಧ್ಯವಿದೆ ಮತ್ತು ಒಬ್ಬ ವ್ಯಕ್ತಿಯ ತೂಕವನ್ನು ತಡೆಯುವ ಸಾಮರ್ಥ್ಯವಿದೆ. ಬೇರೊಬ್ಬರು ಸೇರಿದಂತೆ ಅಥವಾ ಯಾವುದೇ ಹಠಾತ್ ಚಲನೆಗಳಾದರೆ ಈ ಹಾಸಿಗೆಗಳು ಮುರಿಯುವ ನಿರೀಕ್ಷೆಯಿದೆ. ಹಾಗಾಗಿ ಈ ಬಾರಿ ಕ್ರೀಡಾಪಟುಗಳಿಗೆ ಪ್ರಣಯಕ್ಕೆ ಅನುಮತಿ ನೀಡಿಲ್ಲ.