ಕರ್ನಾಟಕ

karnataka

ETV Bharat / sports

ಪ್ರತಿಷ್ಠಿತ ಲಾರಿಯಸ್​ ವರ್ಲ್ಡ್​​​ ಸ್ಪೋರ್ಟ್ಸ್​ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನೀರಜ್​ ಚೋಪ್ರಾ - ಜಾವಲಿನ್ ಥ್ರೋವರ್​ ನೀರಜ್ ಚೋಪ್ರಾ

ನೀರಜ್​ ಚೋಪ್ರಾ ಟೋಕಿಯೋದಲ್ಲಿ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಈ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ 2ನೇ ಭಾರತೀಯ ಎನಿಸಿಕೊಂಡಿದ್ದರು. 23 ವರ್ಷದ ನೀರಜ್​ 87.58 ಮೀಟರ್​ ಜಾವಲಿನ್​ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. 2008ರಲ್ಲಿ 10 ಮೀಟರ್​ ಏರ್​ ರೈಫಲ್​ ವಿಭಾಗದಲ್ಲಿ ಅಭಿನವ್​ ಬಿಂದ್ರಾ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು..

Neeraj Chopra nominated for Laureus World Sports Awards
ನೀರಜ್​ ಚೋಪ್ರಾ ಲಾರಿಯಸ್​ ವರ್ಲ್ಡ್​​​ ಸ್ಪೋರ್ಟ್ಸ್​ ಪ್ರಶಸ್ತಿ

By

Published : Feb 2, 2022, 7:08 PM IST

ಹೈದರಾಬಾದ್​(ಡೆಸ್ಕ್​): ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದ ಜಾವಲಿನ್ ಥ್ರೋವರ್​ ನೀರಜ್ ಚೋಪ್ರಾ ಪ್ರತಿಷ್ಠಿತ ಲಾರಿಯಸ್​ ವರ್ಲ್ಡ್​ ಬ್ರೇಕ್​ ಥ್ರೋ ಆಫ್​ ದ ಇಯರ್​ ಪ್ರಶಸ್ತಿಗೆ ವಿಶ್ವದ ಇತರೆ 5 ದಿಗ್ಗಜ ಕ್ರೀಡಾಪಟುಗಳೊಂದಿಗೆ ನಾಮನಿರ್ದೇಶನಗೊಂಡಿದ್ದಾರೆ.

1300ಕ್ಕೂ ಹೆಚ್ಚು ಕ್ರೀಡಾ ಪತ್ರಕರ್ತರು ಮತ್ತು ವಿಶ್ವದ ಪ್ರಸಾರಕರು ಈ ವರ್ಷದ ಲಾರಿಯಸ್​ ವರ್ಲ್ಡ್​ ಸ್ಪೋರ್ಟ್ಸ್​ ಪ್ರಶಸ್ತಿಗಗಳ 7 ವಿಭಾಗಗಳಿಗೆ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದ್ದಾರೆ. ಸಾರ್ವಕಾಲಿಕ 71 ಶ್ರೇಷ್ಠ ಕ್ರೀಡಾ ದಂತಕಥೆಗಳನ್ನು ಒಳಗೊಂಡಿರುವ ಕ್ರೀಡಾ ತೀರ್ಪುಗಾರರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಮತದಾನ ಮಾಡಿ ವಿಜೇತರನ್ನು ಏಪ್ರಿಲ್‌ನಲ್ಲಿ ಘೋಷಿಸಲಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಲಾರಿಯಸ್​ ವರ್ಲ್ಡ್​ ಬ್ರೇಕ್​ಥ್ರೋ ಆಫ್​ ದ ಇಯರ್​ ಪ್ರಶಸ್ತಿಗೆ ನೀರಜ್​ ಜೊತೆಗೆ ಮೊದಲ ಗ್ರ್ಯಾಂಡ್​​ ಸ್ಲಾಮ್​ ಗೆದ್ದಿರುವ ರಷ್ಯಾದ ಟೆನಿಸ್ ಆಟಗಾರ ಡ್ಯಾನಿಯಲ್ ಮೆಡ್ವೆಡೆವ್​, ಸ್ಪೇನ್ ಫುಟ್​ಬಾಲ್ ತಂಡದ ಪರ ಎಲ್ಲಾ ಪಂದ್ಯಗಳನ್ನು ಆಡಿದ ಮತ್ತು ಬಾರ್ಸಿಲೋನಾ ಪರ 53 ಪಂದ್ಯಗಳನ್ನಾಡಿರುವ ಆಟಗಾರ ಪೆಡ್ರಿ, 18 ವರ್ಷಕ್ಕೆ ಯುಎಸ್​ ಓಪನ್ ಮಹಿಳಾ ಸಿಂಗಲ್ಸ್​ ಗೆದ್ದ ಇಂಗ್ಲೆಂಡ್​ನ ಎಮ್ಮಾ ರಡುಕಾನು, ಟೋಕಿಯೋದಲ್ಲಿ ತ್ರಿಪಲ್​ ಜಂಪನ್​ನಲ್ಲಿ ವಿಶ್ವದಾಖಲೆ ಬ್ರೇಕ್ ಮಾಡಿದ ವೆನುಜವೆಲಾದ ಯುಲಿಮಾರ್ ರೋಜಸ್​, 20ನೇ ವಯಸ್ಸಿಗೆ ಟೋಕಿಯೋದಲ್ಲಿ 200 ಮೀಟರ್​ ಮತ್ತು 400 ಮೀಟರ್​ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಅರಿಯಾರ್ನೆ ಟಿಟ್ಮಸ್ ಸ್ಪರ್ಧೆಯಲ್ಲಿದ್ದಾರೆ.

ನೀರಜ್​ ಚೋಪ್ರಾ ಟೋಕಿಯೋದಲ್ಲಿ ಜಾವಲಿನ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದರು. ಈ ಮೂಲಕ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ 2ನೇ ಭಾರತೀಯ ಎನಿಸಿಕೊಂಡಿದ್ದರು. 23 ವರ್ಷದ ನೀರಜ್​ 87.58 ಮೀಟರ್​ ಜಾವಲಿನ್​ ಎಸೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. 2008ರಲ್ಲಿ 10 ಮೀಟರ್​ ಏರ್​ ರೈಫಲ್​ ವಿಭಾಗದಲ್ಲಿ ಅಭಿನವ್​ ಬಿಂದ್ರಾ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದರು.

ಇದನ್ನೂ ಓದಿ:ಪಿಎಸ್​ಎಲ್​ ವಿಶ್ವದ 2ನೇ ಅತ್ಯುತ್ತಮ ಟಿ20 ಲೀಗ್, IPL​ಗಿಂತ ಹೆಚ್ಚು ಹಿಂದೆ ಉಳಿದಿಲ್ಲ: ಮೈಕಲ್ ವಾನ್

ABOUT THE AUTHOR

...view details