ಜೈಪುರ್(ರಾಜಸ್ಥಾನ): ನವೆಂಬರ್ 17ರಿಂದ ಭಾರತ-ನ್ಯೂಜಿಲ್ಯಾಂಡ್ (IND vs NZ) ತಂಡಗಳ ಮಧ್ಯೆ ಟಿ20 ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಈ ಪಂದ್ಯಾವಳಿ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳಿಗೆ ಅನುಮತಿ ನೀಡಲಾಗಿದ್ದು, ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಜೈಪುರದ ಸವಾಯಿ ಮಾನ್ಸಿಂಗ್ (SMS Stadium Jaipur) ಮೈದಾನದಲ್ಲಿ ನವೆಂಬರ್ 17ರಂದು ಮೊದಲ ಟಿ20 ಪಂದ್ಯ ನಿಗದಿಯಾಗಿದೆ. ಅದಕ್ಕಾಗಿ ರಾಜಸ್ಥಾನ ಕ್ರಿಕೆಟ್ ಸಂಸ್ಥೆ (Rajasthan Cricket Association) ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಲು ಹೆಚ್ಚಿನ ಜನರು ಆಗಮಿಸುವ ಸಾಧ್ಯತೆ ಇದ್ದು, ಕೊರೊನಾ ಮಾರ್ಗಸೂಚಿ ಅನುಸರಣೆ ಮಾಡಲಾಗ್ತಿದೆ. ಪ್ರೇಕ್ಷಕರು ಟಿಕೆಟ್ನೊಂದಿಗೆ ಆರ್ಟಿ-ಪಿಸಿಆರ್ (RT-PCR) ಮತ್ತು ವ್ಯಾಕ್ಸಿನೇಷನ್ ಪ್ರಮಾಣಪತ್ರ ತರುವುದು ಅವಶ್ಯವಾಗಿದೆ. ಪಂದ್ಯದ ಟಿಕೆಟ್ ಮಾರಾಟ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮೈದಾನದ ಹೊರಗೆ ಕೌಂಟರ್ ತೆರೆಯಲಾಗಿದೆ. ಟಿಕೆಟ್ ಖರೀದಿಸುವವರು ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಹಾಗೂ ವ್ಯಾಕ್ಸಿನೇಷನ್ ಪ್ರಮಾಣಪತ್ರ ತರಬೇಕು ಎಂದು ತಿಳಿಸಲಾಗಿದೆ.