ವೆಲ್ಲಿಂಗ್ಟನ್:ನ್ಯೂಜಿಲ್ಯಾಂಡ್ ಹಿರಿಯ ವೇಗಿ ಟಿಮ್ ಸೌಥಿ ಗುರುವಾರ ಸರ್ ರಿಚರ್ಡ್ ಹ್ಯಾಡ್ಲಿ ಪ್ರಶಸ್ತಿ ಪಡೆದಿದ್ದಾರೆ. 2021ರ ಕ್ಯಾಲೆಂಡರ್ ವರ್ಷದಲ್ಲಿ ನೀಡಿದ ಪ್ರದರ್ಶನಕ್ಕೆ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದ 3ನೇ ದಿನವಾದ ಗುರುವಾರ ಸೌಥಿ ಜೊತೆಗೆ ಮಾಜಿ ಮಹಿಳಾ ಕ್ರಿಕೆಟರ್ ಪೆನ್ನಿ ಕಿನ್ಸೆಲ್ಲಾ ಬೆರ್ಟ್ ಸಟ್ಕ್ಲೈಫ್ ಪ್ರಶಸ್ತಿ, ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಡಿವೋನ್ ಕಾನ್ವೆ ಹಾಗೂ ವರ್ಷದ ದೇಶಿ ಕ್ರಿಕೆಟರ್ ಪ್ರಶಸ್ತಿಯನ್ನು ಮಹಿಳಾ ಕ್ರಿಕೆಟರ್ ನ್ಯಾನ್ಸಿ ಪಟೇಲ್ ಹಾಗೂ ಪುರುಷರ ವಿಭಾಗದಲ್ಲಿ ಟಾಮ್ ಬ್ರಸ್ ಮತ್ತು ರಾಬೀ ಒ'ಡನೆಲ್ ಪಡೆದುಕೊಂಡರು.