ಕರ್ನಾಟಕ

karnataka

ETV Bharat / sports

ಟೆಸ್ಟ್​ನಲ್ಲಿ 350 ವಿಕೆಟ್​ ಕಿತ್ತ ಟಿಮ್ ಸೌಥಿ.. ನ್ಯೂಜಿಲೆಂಡ್​ನ ಮೂರನೇ ಆಟಗಾರ ದಾಖಲೆ - Tim Southee Test carrer

350 ವಿಕೆಟ್​ ಸಾಧನೆ ಮಾಡಿದ ಟಿಮ್ ಸೌಥಿ- ನ್ಯೂಜಿಲ್ಯಾಂಡ್​ ಟೆಸ್ಟ್​ ನಾಯಕ ಟಿಮ್ ಸೌಥಿ- 350 ವಿಕೆಟ್​ ಪಡೆದ ಕಿವೀಸ್​ನ ಮೂರನೇ ಬೌಲರ್ ಸೌಥಿ

tim-southee-completes-350-test-wickets
ಟೆಸ್ಟ್​ನಲ್ಲಿ 350 ವಿಕೆಟ್​ ಕಿತ್ತ ಟಿಮ್ ಸೌಥಿ

By

Published : Dec 28, 2022, 12:37 PM IST

ಕರಾಚಿ(ಪಾಕಿಸ್ತಾನ):ನ್ಯೂಜಿಲ್ಯಾಂಡ್​ ವೇಗಿ ಮತ್ತು ಟೆಸ್ಟ್ ತಂಡದ ನಾಯಕ ಟಿಮ್ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ 350 ವಿಕೆಟ್‌ಗಳ ಮೈಲಿಗಲ್ಲು ದಾಟಿದರು. ಈ ಸಾಧನೆ ಮಾಡಿದ ಕಿವೀಸ್​ನ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತಿಹೆಚ್ಚು ವಿಕೆಟ್​ ಪಡೆದ ಪಟ್ಟಿಯಲ್ಲಿ ಸೌಥಿ 26 ನೇ ಬೌಲರ್​ ಆಗಿದ್ದಾರೆ.

ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ 3 ವಿಕೆಟ್​ ಪಡೆದ ಸೌಥಿ ಈ ಸಾಧನೆಗೆ ಪಾತ್ರರಾದರು. ಕಿವೀಸ್​ ಅನುಭವಿ ವೇಗಿ ಸೌಥಿ 89 ಪಂದ್ಯಗಳಲ್ಲಿ 28.94 ರ ಸರಾಸರಿಯಲ್ಲಿ 350 ವಿಕೆಟ್​ ಕಿತ್ತಿದ್ದಾರೆ. ಇನಿಂಗ್ಸ್‌ನಲ್ಲಿ 64 ಕ್ಕೆ 7 ಮತ್ತು ಪಂದ್ಯದಲ್ಲಿ 108 ಕ್ಕೆ 10 ವಿಕೆಟ್​ ಕಿತ್ತಿದ್ದು ಅತ್ಯುತ್ತಮ ಸಾಧನೆಯಾಗಿದೆ. 14 ಬಾರಿ 5 ವಿಕೆಟ್​ ಗೊಂಚಲು 1 ಬಾರಿ 10 ವಿಕೆಟ್​ ಪಡೆದಿದ್ದಾರೆ.

ಇನ್ನು ನ್ಯೂಜಿಲ್ಯಾಂಡ್​​ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಮಾಜಿ ಆಲ್​ ರೌಂಡರ್ ರಿಚರ್ಡ್ ಹ್ಯಾಡ್ಲಿ ಮೊದಲಿಗರು. 86 ಟೆಸ್ಟ್‌ಗಳಲ್ಲಿ 22.29 ರ ಸರಾಸರಿಯಲ್ಲಿ 431 ವಿಕೆಟ್‌ಗಳನ್ನು ಪಡೆದರೆ, ನಂತರದಲ್ಲಿ ಡೇನಿಯಲ್ ವೆಟ್ಟೋರಿ 113 ಪಂದ್ಯಗಳಲ್ಲಿ 361 ವಿಕೆಟ್​ ಕಿತ್ತು 2ನೇ ಸ್ಥಾನದಲ್ಲಿದ್ದಾರೆ.

ಅತಿಹೆಚ್ಚು ವಿಕೆಟ್​ ಪಡೆದ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ (800 ವಿಕೆಟ್), ದಿವಂಗತ ಆಸ್ಟ್ರೇಲಿಯಾದ ಶೇನ್ ವಾರ್ನ್ (708 ವಿಕೆಟ್), ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ (675), ಭಾರತದ ಸ್ಪಿನ್ನರ್ ಅನಿಲ್ ಕುಂಬ್ಳೆ (619) ಮತ್ತು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (566) ಟಾಪ್​​ 5 ಸ್ಥಾನಗಳಿದ್ದಾರೆ.

ಓದಿ:ಟಿ20ಗೆ ಹಾರ್ದಿಕ್​ ಪಾಂಡ್ಯ, ಏಕದಿನಕ್ಕೆ ರೋಹಿತ್​ ಸಾರಥ್ಯ: ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ

ABOUT THE AUTHOR

...view details