ನವದೆಹಲಿ :ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ದ್ವಿತೀಯಾರ್ಧದ ಐಪಿಎಲ್ಗೆ ಬದಲಿ ಆಟಗಾರರನ್ನು ಘೋಷಿಸಿದೆ. ವಿಶೇಷವೆಂದರೆ ಈ ಬಾರಿ ತಂಡ ಸೇರಿರುವ ಆಟಗಾರರಲ್ಲಿ ಸಿಂಗಾಪುರ್ನ ಟಿಮ್ ಡೇವಿಡ್ ಮೊದಲ ಆಟಗಾರನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ನ್ಯೂಜಿಲ್ಯಾಂಡ್ನ ಯುವ ಆಟಗಾರ ಫಿನ್ ಅಲೆನ್ ದ್ವಿತೀಯಾರ್ಧದ ಐಪಿಎಲ್ಗೆ ಅಲಭ್ಯರಾಗುತ್ತಿರುವ ಕಾರಣ ಡೇವಿಡ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರು ಈಗಾಗಲೇ ಬಿಬಿಎಲ್, ಪಿಎಸ್ಎಲ್, ಟಿ20 ಬ್ಲಾಸ್ಟ್ ಮತ್ತು ಸಿಪಿಎಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
25 ವರ್ಷದ ಯುವ ಆಟಗಾರ ಸಿಂಗಾಪುರ್ ತಂಡದ ಪರ 14 ಟಿ20 ಪಂದ್ಯಗಳನ್ನ ಆಡಿದ್ದಾರೆ. ಅವರು 4 ಅರ್ಧಶತಕದ ಸಹಿತ 558 ರನ್ ಸಿಡಿಸಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಟಿ20 ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆಯುವ ಮೂಲಕ ವಿಶೇಷ ದಾಖಲೆಗೆ ಪಾತ್ರರಾಗಲಿದ್ದಾರೆ.
ಅವರು ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿರುವ ಸಿಂಗಾಪುರ್ನ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟರ್ ಆಗಿ ಡೇವಿಡ್ ಗುರುತಿಸಿಕೊಳ್ಳಲಿದ್ದಾರೆ. ಇನ್ನು, ಟಿ20 ಕ್ರಿಕೆಟ್ನಲ್ಲಿ 50 ಟಿ20 ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 155.84ರ ಸ್ಟ್ರೈಕ್ರೇಟ್ನಲ್ಲಿ 1186 ರನ್ಗಳಿಸಿದ್ದಾರೆ.
ಇದನ್ನು ಓದಿ:ಆರ್ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..