ಲಾರ್ಡ್ಸ್ (ಲಂಡನ್): ಆ್ಯಶಸ್ ಲಾರ್ಡ್ಸ್ ಟೆಸ್ಟ್ನ ಐದನೇ ದಿನ ಹಲವಾರು ವಿವಾದಗಳಿಗೆ ಕಾರಣವಾಯಿತು. ಈ ನಡುವೆಯೂ ಆಸ್ಟ್ರೇಲಿಯಾ 43 ರನ್ನಿಂದ ಎರಡನೇ ಆ್ಯಶಸ್ ಪಂದ್ಯವನ್ನು ಗೆದ್ದು, ಇಂಗ್ಲೆಂಡ್ ನೆಲದಲ್ಲಿ ಹ್ಯಾಟ್ರಿಕ್ ಜಯ ಬರೆಯಿತು.
ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯನ್ ಆಟಗಾರರ ನಡುವೆ ವಾದ-ವಿವಾದಗಳು, ಜೊತೆಗೆ ಸ್ಲೆಡ್ಜಿಂಗ್ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಎಂಸಿಸಿಯ ಸದಸ್ಯರು ಆಸ್ಟ್ರೇಲಿಯಾದ ಆಟಗಾರರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಇದಕ್ಕೆ ಇಂಗ್ಲೆಂಡ್ ಕ್ರಿಕೆಟ್ ಆಸಿಸ್ ಆಟಗಾರರ ಬಳಿ ಕ್ಷಮೆಯನ್ನು ಕೇಳಿದೆ. ಅಲ್ಲದೇ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ನ ಮೂವರು ಸದಸ್ಯರನ್ನು ಅಮಾನತುಗೊಳಿಸಿದೆ.
ಐದನೇ ದಿನದಾಟದ ಭೋಜನ ವಿರಾಮದ ವೇಳೆದ ಡ್ರೆಸ್ಸಿಂಗ್ ರೂಮ್ಗೆ ಆಸ್ಟ್ರೇಲಿಯನ್ ಆಟಗಾರರು ಮರಳುವಾಗ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ನ ಸದಸ್ಯ ಪ್ರೇಕ್ಷಕರು ಉಸ್ಮಾನ್ ಖವಾಜಾ ಅವರನ್ನು ನಿಂದಿಸಿದ್ದಾರೆ. ಈ ವೇಳೆ ಖವಾಜಾ ಸಹ ಪ್ರತಿಕ್ರಿಯಿಸಿದ್ದಾರೆ. ನಂತರ ಅಲ್ಲಿ ಇದ್ದ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ವಿವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರೇಕ್ಷಕರು ಆಸ್ಟ್ರೇಲಿಯಾದ ಆಟಗಾರರ ವಿರುದ್ಧ ಜಗಳ ಮಾಡಲು ಪ್ರಮುಖ ಕಾರಣ ಎಂದರೆ ಜಾನಿ ಬೈರ್‌ಸ್ಟೋವ್ ಅವರ ವಿವಾದಾತ್ಮಕ ರನ್ ಔಟ್. ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನ 52 ನೇ ಓವರ್ ಆಡುವಾಗ ಕ್ಯಾಮರೂನ್ ಗ್ರೀನ್ ಬೌಲಿಂಗ್ನಲ್ಲಿ ಬಾಲ್ ಬೈರ್‌ಸ್ಟೋವ್ ಎಡ ಭಾಗದಿಂದ ಬೌನ್ಸರ್ ಆದ ಬಾಲ್ ಡಕ್ ಆಗುವ ಮೂಲಕ ಕೀಪರ್ ಅಲೆಕ್ಸ್ ಕ್ಯಾರಿ ಅವರ ಗ್ಲೌಸ್ ಸೇರಿತು.