ಕೊಲೊಂಬೊ: ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಆಲ್ರೌಂಡರ್ ತಿಸಾರ ಪೆರೆರಾ ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಶ್ರೀಲಂಕಾ ಪರ 2009 ರಲ್ಲಿ ಭಾರತ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. 13 ವರ್ಷಗಳ ಅವಧಿಯಲ್ಲಿ ಸಿಂಹಳೀಯರ ಪರ 166 ಏಕದಿನ ಪಂದ್ಯ, 6 ಟೆಸ್ಟ್ ಮತ್ತು 84 ಟಿ-20 ಪಂದ್ಯಗಳನ್ನಾಡಿದ್ದರು.
ಪೆರೆರಾ 6 ಟೆಸ್ಟ್ ಪಂದ್ಯಗಳಿಂದ 203 ರನ್ ಮತ್ತು 11 ವಿಕೆಟ್, 166 ಏಕದಿನ ಪಂದ್ಯಗಳಿಂದ 2,338 ರನ್ ಮತ್ತು 175 ವಿಕೆಟ್ ಹಾಗೂ ಟಿ-20 ಕ್ರಿಕೆಟ್ನಲ್ಲಿ 1,204 ರನ್ ಮತ್ತು 31 ವಿಕೆಟ್ ಪಡೆದಿದ್ದಾರೆ.
ಮುಂಬರುವ ಬಾಂಗ್ಲಾದೇಶ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ನಾಯಕ ದಿಮುತ್ ಕರುಣರತ್ನೆ, ಏಂಜೆಲೋ ಮ್ಯಾಥ್ಯೂಸ್, ಸುರಂಗ ಲಕ್ಮಲ್, ಚಾಂಡಿಮಲ್ ಮತ್ತು ಪೆರೆರಾರಂತಹ ಹಿರಿಯ ಆಟಗಾರರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇಲ್ಲ ಎಂದು ಎಸ್ಎಲ್ಸಿ ತಿಳಿಸಿತ್ತು. ಹಾಗಾಗಿ ಯುವ ಕ್ರಿಕೆಟಿಗರಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಪೆರೆರಾ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ ಫ್ರಾಂಚೈಸಿ ಲೀಗ್ಗಳಲ್ಲಿ ಆಡುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿ:ಭಾರತಕ್ಕೆ 37 ಲಕ್ಷ ರೂ ದೇಣಿಗೆ ನೀಡಿದ ಕ್ರಿಕೆಟ್ ಆಸ್ಟ್ರೇಲಿಯಾ