ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ. ಟಿ20, ಏಕದಿನ ಮತ್ತು ಟೆಸ್ಟ್‌ನಲ್ಲಿ ಕೊಹ್ಲಿಗೆ ರನ್ ಕಲೆಹಾಕಲು ಸಾಧ್ಯವಾಗುತ್ತಿಲ್ಲ. ಇದೀಗ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮಾಡಿದ್ದಾರೆ.
‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’: ಕೊಹ್ಲಿಗೆ ಧೈರ್ಯ ತುಂಬಿದ ಪಾಕ್ ಕ್ರಿಕೆಟಿಗ - ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮತ್ತೊಮ್ಮೆ ವಿಫಲ
ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸುತ್ತಿದ್ದಂತೆ ಪಾಕ್ ಕ್ರಿಕೆಟಿಗ ಬಾಬರ್ ಅಜಂ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ವಿರಾಟ್ಗೆ ಆತ್ಮಸ್ಥೈರ್ಯ ತುಬಂದಿ ಬಾಬರ್ ಆಜಮ್
‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’ ಎಂದು ಟ್ವೀಟ್‌ನಲ್ಲಿ ಬಾಬರ್ ಅಜಂ ಬರೆದಿದ್ದಾರೆ. ಅಷ್ಟೇ ಅಲ್ಲ, ಇದರ ಜೊತೆ ಫೋಟೋ ಪೋಸ್ಟ್ ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಪಂದ್ಯದ ಸಮಯದಲ್ಲಿ ತೆಗೆದ ಫೋಟೋ ಇದಾಗಿದ್ದು, ಬಾಬರ್ ಹೆಗಲ ಮೇಲೆ ವಿರಾಟ್ ಕೊಹ್ಲಿ ಕೈ ಹಾಕಿರುವುದು ಕಾಣುತ್ತದೆ.
ಇದನ್ನೂ ಓದಿ:ಲಾರ್ಡ್ಸ್‌ನಲ್ಲಿ ಟಾಪ್ಲಿ 'ಚೆಂಡು'ಮಾರುತ: ಭಾರತದ ವಿರುದ್ಧ 100 ರನ್‌ಗಳಿಂದ ಗೆದ್ದ ಇಂಗ್ಲೆಂಡ್