ಮುಂಬೈ: ಹಾಲಿ ಚೆನ್ನೈ ಸೂಪರ್ ಕಿಂಗ್ಸ್ 2022ರ ಐಪಿಎಲ್ನಲ್ಲಿ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಸೋಲು ಕಂಡು ಹೀನಾಯ ಪ್ರದರ್ಶನ ತೋರಿದೆ. ಪ್ರಸ್ತುತ ಲೀಗ್ನ ಅಂಕಪಟ್ಟಿಯಲ್ಲಿ ಇನ್ನೂ ಖಾತೆಯನ್ನು ತೆರೆಯಲಾಗದೇ ಕೊನೆಯ ಸ್ಥಾನದಲ್ಲಿದೆ. ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ಸೋಲು ಕಾಣುತ್ತಿದ್ದಂತೆ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
'ಸಿಎಸ್ಕೆ, ದಕ್ಷಿಣ ಆಫ್ರಿಕಾ ತಂಡದ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ರನ್ನು ತಂಡದಿಂದ ಹೊರ ಬಿಟ್ಟು ದೊಡ್ಡ ಪ್ರಮಾದ ಎಸಗಿದೆ. ಜೊತೆಗೆ, ರವೀಂದ್ರ ಜಡೇಜಾ ನಾಯಕತ್ವಕ್ಕಿಂತ ಕ್ರಿಕೆಟ್ನತ್ತ ಹೆಚ್ಚು ಗಮನ ನೀಡಬೇಕಿತ್ತು' ಎಂದರು. 2022ರ ಐಪಿಎಲ್ಗೆ ಕೆಲವೇ ದಿನಗಳಿರುವಾಗ ಎಂ.ಎಸ್.ಧೋನಿ ತಂಡದ ನಾಯಕತ್ವ ತ್ಯಜಿಸಿದ್ದು, ರವೀಂದ್ರ ಜಡೇಜಾ ಆ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದ್ದರು. ಒಂದು ವೇಳೆ ಧೋನಿ ನಾಯಕನಾಗಿ ಮುಂದುವರಿಯಲು ಬಯಸದಿದ್ದರೆ, ಡುಪ್ಲೆಸಿಸ್ ಸಿಎಸ್ಕೆ ತಂಡದ ನಾಯಕನಾಗಬೇಕಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.