ಕರ್ನಾಟಕ

karnataka

ETV Bharat / sports

ಅಮೋಘ ಫಾರ್ಮ್​ನಲ್ಲಿರುವ ಈತನನ್ನ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆ ಮಾಡಿ: ವೆಂಗಸರ್ಕಾರ್​ - ಭಾರತ ದಕ್ಷಿಣ ಅಫ್ರಿಕಾ ಸರಣಿ

ಋತುರಾಜ್​ ಗಾಯಕ್ವಾಡ್​ 2020ರ ಐಪಿಎಲ್​ನ ಕೊನೆಯ 3 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಬೆನ್ನಲ್ಲೇ ಹಿಂದೆ ತಿರುಗಿ ನೋಡಿಲ್ಲ. 2021ರ ಐಪಿಎಲ್​ನಲ್ಲಿ 16 ಪಂದ್ಯಗಳಿಂದ 626 ರನ್​ಗಳಿಸಿ ಆರೆಂಜ್ ಕ್ಯಾಪ್ ಪಡೆದ ಕಿರಿಯ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು.

Dilip Vengsarkar wants Ruturaj Gaikwad to SA tour
ದಿಲೀಪ್ ವೆಂಗಸರ್ಕರ್​

By

Published : Dec 13, 2021, 5:14 PM IST

ಮುಂಬೈ:2021ರ ಐಪಿಎಲ್​ ಆವೃತ್ತಿಯಲ್ಲಿ ಗರಿಷ್ಠ ರನ್​ಗಳಿಸಿ ಆರೆಂಜ್​ ಕ್ಯಾಪ್​ ಪಡೆದ ಅತ್ಯಂತ ಕಿರಿಯ ಬ್ಯಾಟರ್​ ಎನಿಸಿಕೊಂಡಿರುವ ಋತುರಾಜ್​ ಗಾಯಕ್ವಾಡ್​ ಪ್ರಸ್ತುತ ನಡೆಯುತ್ತಿರುವ ವಿಜಯ ಹಜಾರೆ ಟ್ರೋಪಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಅಮೋಘ ಫಾರ್ಮ್​ನಲ್ಲಿದ್ದು, ಆತನನ್ನು ಭಾರತ ತಂಡಕ್ಕೆ ಕರೆತರಲು ಇದು ಸು -ಸಮಯ ಎಂದು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್​ಸರ್ಕಾರ್​​ ಅಭಿಪ್ರಾಯಪಟ್ಟಿದ್ದಾರೆ.

ಋತುರಾಜ್​ ಗಾಯಕ್ವಾಡ್​ 2020ರ ಐಪಿಎಲ್​ನ ಕೊನೆಯ 3 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಬೆನ್ನಲ್ಲೇ ಹಿಂದೆ ತಿರುಗಿ ನೋಡಿಲ್ಲ. 2021ರ ಐಪಿಎಲ್​ನಲ್ಲಿ 16 ಪಂದ್ಯಗಳಿಂದ 626 ರನ್​ಗಳಿಸಿ ಆರೆಂಜ್ ಕ್ಯಾಪ್ ಪಡೆದ ಕಿರಿಯ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾಗಿದ್ದರು.

ಋತುರಾಜ್ ಗಾಯಕ್ವಾಡ್

ನಂತರ ನಡೆದ ಸೈಯದ್​ ಮುಷ್ತಾಕ್ ಅಲಿ ಟಿ-20ಯಲ್ಲಿ 5 ಪಂದ್ಯಗಳಿಂದ 259 ಮತ್ತು ವಿಜಯ್​ ಹಜಾರೆ ಟ್ರೋಫಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ಹ್ಯಾಟ್ರಿಕ್​ ಶತಕದ ಸಹಿತ ಬರೋಬ್ಬರಿ 435 ರನ್​ಗಳಿಸಿದ್ದಾರೆ. ಹಾಗಾಗಿ ವೆಂಗ್​ಸರ್ಕಾರ್​ ಅತ್ಯುತ್ತಮ ಫಾರ್ಮ್​ನಲ್ಲಿರುವ ಗಾಯಕ್ವಾಡ್ ಅವ​ರನ್ನು ಮುಂಬರುವ ದಕ್ಷಿಣ ಆಫ್ರಕಾ ಪ್ರವಾಸಕ್ಕೆ ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.

ನೀವು ಫಾರ್ಮ್​ನಲ್ಲಿರುವ ಬ್ಯಾಟರ್​​ನನ್ನು ಆಯ್ಕೆ ಮಾಡಬೇಕು. ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಆತ ಇನ್ನು ಎಷ್ಟು ರನ್​ಗಳಿಸಬೇಕು? ಆತನನ್ನು ಆಯ್ಕೆಗಾರರು ಆಯ್ಕೆ ಮಾಡಲು ಇದು ಒಳ್ಳೆಯ ಸಮಯ ಮತ್ತು ಆತನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ರನ್​ಗಳಿಸಲು ಅವಕಾಶ ಮಾಡಿಕೊಡಬೇಕೆಂದು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಅಭ್ಯಾಸ ಶಿಬಿರಕ್ಕೆ ಹಾಜರಾಗದೇ ನಾಯಕತ್ವ ಕಳೆದುಕೊಂಡ ಬಗ್ಗೆ ಅಸಮಾಧಾನ ಹೊರ ಹಾಕಿದರಾ ಕೊಹ್ಲಿ?

ABOUT THE AUTHOR

...view details