ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ ಇಂದಿನಿಂದ ಆರಂಭವಾಗಿ ಐದು ದಿನಗಳ ಕಾಲ ನಡೆಯಲಿದೆ. ಈ ಪಂದ್ಯಕ್ಕೆ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಸಂಪೂರ್ಣ ಸಿದ್ಧತೆ ನಡೆಸಿಕೊಂಡಿವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೂ ಮುನ್ನ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಆಸ್ಟ್ರೇಲಿಯಾಕ್ಕೆ "ಇಂಪ್ಯಾಕ್ಟ್ ಪ್ಲೇಯರ್" ಎಂದು ಕರೆದಿದ್ದಾರೆ.
ಐಸಿಸಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ವಾರ್ನರ್ ಕ್ರೀಸ್ನಲ್ಲಿದ್ದಾಗ ಅವರು ಹೆಚ್ಚಿನ ತಪ್ಪುಗಳನ್ನು ಮಾಡದ ಕಾರಣ ಅವರು ರನ್ ಗಳಿಸುವುದನ್ನು ತಡೆಯುವುದು ಕಷ್ಟ. ಟೆಸ್ಟ್ ಮತ್ತು ಪ್ರಮುಖ ಪಂದ್ಯದಲ್ಲಿ ಡೇವಿಡ್ ವಾರ್ನರ್ ಪ್ರಭಾವ ಬೀರುತ್ತಾರೆ ಎಂದು ತಮ್ಮ ಅಭಿಪ್ರಾಯವನ್ನು ವಿರಾಟ್ ವ್ಯಕ್ತಪಡಿಸಿದ್ದಾರೆ.
"ಆಸ್ಟ್ರೇಲಿಯಾಕ್ಕೆ ಡೇವಿಡ್ ವಾರ್ನರ್ ಇಂಪ್ಯಾಕ್ಟ್ ಪ್ಲೇಯರ್. ಡೇವಿಡ್ ಕ್ರೀಸ್ಗೆ ಬಂದಾಗ ಅವರು ನಮ್ಮ ಕೈಯಿಂದ ಆಟವನ್ನು ಕಸಿದುಕೊಳ್ಳುತ್ತಾರೆ. ಅವರನ್ನು ಆದಷ್ಟು ಬೇಗ ಹೊರಗೆಕೂರಿಸಲು ನಾವು ಬಯಸುತ್ತೇವೆ, ಇಲ್ಲದಿದ್ದರೆ ವಾರ್ನರ್ ಭಾರತವನ್ನು ಕಾಡುವುದರಲ್ಲಿ ಅನುಮಾನವೇ ಇಲ್ಲ. ಅವರ ಬ್ಯಾಟ್ನಿಂದ ಫೋರ್ಗಳು ಬರಲಾರಂಭವಾದರೆ ನಿಯಂತ್ರಿಸುವುದು ಕಷ್ಟವಾಗಲಿದೆ. ಪಿಚ್ಗೆ ಸೆಟ್ ಆದ ನಂತರ ಅವರು ಹೆಚ್ಚಿನ ತಪ್ಪುಗಳನ್ನು ಮಾಡುವುದಿಲ್ಲ" ಎಂದು ವಿರಾಟ್ ಹೇಳಿದ್ದಾರೆ.
"ವಾರ್ನರ್ ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. ಅವರು ತಂಡದ ಕೀ ಆಟಗಾರ ಅವರ ಇತಿಹಾಸದಲ್ಲಿ ಆಸಿಸ್ಗೆ ಆಡಿರುವ ಉತ್ತಮ ಇನ್ನಿಂಗ್ಸ್ಗಳ ಪಟ್ಟಿಯೇ ಇದೆ. ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರಬಲ ಎದುರಾಳಿ ಬ್ಯಾಟರ್ ವಾರ್ನರ್ ಆಗುವುದರಲ್ಲಿ ಅನುಮಾನವೇ ಇಲ್ಲ. ಆತನನ್ನು ಬೇಗನೆ ಔಟ್ ಮಾಡಲು ನಮ್ಮ ಬೌಲರ್ಗಳು ಶ್ರಮಿಸಬೇಕಾಗುತ್ತದೆ" ಎಂದಿದ್ದಾರೆ.