ಕರ್ನಾಟಕ

karnataka

ETV Bharat / sports

ಭಾರತ-ದ.ಆಫ್ರಿಕಾ 3ನೇ ಟೆಸ್ಟ್​ ಕೇಪ್​​ಟೌನ್​ಗೆ ಸ್ಥಳಾಂತರ - India-South Africa series moved to Cape Town from Johannesburg

ಉಭಯ ದೇಶಗಳ ನಡುವಿನ ಮೂರು ಟೆಸ್ಟ್‌ ಪಂದ್ಯಗಳು ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ. ಟೆಸ್ಟ್‌ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ನಾಲ್ಕು ಟಿ20 ಪಂದ್ಯಗಳು ಕೇಪ್‌ಟೌನ್‌ನಲ್ಲಿ ನಡೆಯಲಿವೆ.

ಭಾರತ-ದ.ಆಫ್ರಿಕಾ ಟೆಸ್ಟ್​ ಸರಣಿ
ಭಾರತ-ದ.ಆಫ್ರಿಕಾ ಟೆಸ್ಟ್​ ಸರಣಿ

By

Published : Nov 5, 2021, 5:05 PM IST

ಜೋಹಾನ್ಸ್‌ಬರ್ಗ್: ವರ್ಷದ ಕೊನೆಯಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ತೆರಳಲಿದೆ. ಈ ವೇಳೆ ಭಾರತೀಯ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌, ಏಕದಿನ ಮತ್ತು ಟಿ20 ಸರಣಿ ಆಡಲಿದೆ.

ಡಿಸೆಂಬರ್ 17ರಿಂದ ಉಭಯ ತಂಡಗಳ ಮಧ್ಯೆ ಟೆಸ್ಟ್​ ಸರಣಿ ಆರಂಭವಾಗಲಿದೆ. ಈ ಮೊದಲು ಮೊದಲನೇ ಮತ್ತು ಮೂರನೇ ಟೆಸ್ಟ್​ ಪಂದ್ಯವನ್ನು ದ. ಆಫ್ರಿಕಾ ಕ್ರಿಕೆಟ್​ ಮಂಡಳಿ ಜೋಹಾನ್ಸ್‌ಬರ್ಗ್​ನಲ್ಲಿ ನಡೆಸಲು ನಿರ್ಧರಿಸಿತ್ತು. ಆದರೆ ಈಗ ದಿಢೀರ್ ಮೂರನೇ ಟೆಸ್ಟ್​ ಪಂದ್ಯವನ್ನು ಕೇಪ್‌ಟೌನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಸ್‌ಎ ಟ್ವೀಟ್​​ ಮೂಲಕ ಶುಕ್ರವಾರ ತಿಳಿಸಿದೆ. ಆದರೆ ಸ್ಥಳಾಂತರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ.

ಡಿಸೆಂಬರ್‌-ಜನವರಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಮೂರು ಟೆಸ್ಟ್‌ ಪಂದ್ಯ, ಮೂರು ಏಕದಿನ ಪಂದ್ಯ ಮತ್ತು ನಾಲ್ಕು ಟಿ20 ಪಂದ್ಯಗಳು ನಡೆಯಲಿವೆ. ಡಿಸೆಂಬರ್ 17ರಿಂದ 21ರ ವರೆಗೆ ಮೊದಲ ಟೆಸ್ಟ್ ಸೆಂಚುರಿಯನ್‌ನಲ್ಲಿ, ಡಿಸೆಂಬರ್‌ 26ರಿಂದ 30ರ ವರೆಗೆ ದ್ವಿತೀಯ ಟೆಸ್ಟ್‌ ಪಂದ್ಯ, ಜನವರಿ 3ರಿಂದ 7ರ ವರೆಗೆ ಕೇಪ್​ಟೌನ್​​​ನಲ್ಲಿ ಮೂರನೇ ಟೆಸ್ಟ್‌ ಪಂದ್ಯ ನಡೆಯಲಿವೆ.

ABOUT THE AUTHOR

...view details