ಕರ್ನಾಟಕ

karnataka

ETV Bharat / sports

ಆರ್​ಸಿಬಿ ಗೆಲುವಿಗೆ ಅಡ್ಡಿಯಾಗುವರೇ ರಾಜಸ್ಥಾನ್​ ಬಳಗದಲ್ಲಿರುವ ಮಾಜಿ ತ್ರಿಮೂರ್ತಿಗಳು? - ದೇವದತ್​ ಪಡಿಕ್ಕಲ್

ಎರಡೂ ತಂಡಗಳು 15ನೇ ಆವೃತ್ತಿಯಲ್ಲಿ ತಲಾ 2 ಪಂದ್ಯಗಳನ್ನಾಡಿದ್ದು, ಆರ್​ ಆರ್​ 2 ಪಂದ್ಯಗಳನ್ನು ಜಯಿಸಿದ್ದರೆ, ಆರ್​ಸಿಬಿ ತಲಾ ಒಂದು ಜಯ ಮತ್ತು ಸೋಲು ಕಂಡಿದೆ. ಇಂದು 2 ತಂಡಗಳಿಗೂ 3ನೇ ಪಂದ್ಯವಾಗಲಿದೆ. ಈ ಪಂದ್ಯದ ವಿಶೇಷ ಎಂದರೆ ಕಳೆದ ಆವೃತ್ತಿಗಳಲ್ಲಿ ಆಡಿದ್ದ ಕೆಲವು ಆಟಗಾರರು ಈ ಬಾರಿ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

This 3 former RCB players first time playing against RCB in ipl
ರಾಯಲ್​ ಚಾಲೆಂಜರ್ಸ್ ಬೆಂಗಳೂರು

By

Published : Apr 5, 2022, 6:47 PM IST

ಮುಂಬೈ: ಮಂಗಳವಾರ ಆರ್​ಸಿಬಿ ತಂಡ ಅಗ್ರಸ್ಥಾನಿ ರಾಜಸ್ಥಾನ್ ರಾಯಲ್ಸ್​ ತಂಡವನ್ನು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಎದುರಿಸಲಿದೆ. ಈ ಪಂದ್ಯದಲ್ಲಿ ಆರ್​ಸಿಬಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಆಡಿದ್ದ ಕೆಲವು ಆಟಗಾರರು ಇದೀಗ ತಾವೂ ಐಪಿಎಲ್​ನಲ್ಲಿ ಗುರುತಿಸಿಕೊಂಡಿದ್ದ ತಂಡದ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ.

ಎರಡೂ ತಂಡಗಳು 15ನೇ ಆವೃತ್ತಿಯಲ್ಲಿ ತಲಾ 2 ಪಂದ್ಯಗಳನ್ನಾಡಿದ್ದು, ಆರ್​ ಆರ್​ 2 ಪಂದ್ಯಗಳನ್ನು ಜಯಿಸಿದ್ದರೆ, ಆರ್​ಸಿಬಿ ತಲಾ ಒಂದು ಜಯ ಮತ್ತು ಸೋಲು ಕಂಡಿದೆ. ಇಂದು 2 ತಂಡಗಳಿಗೂ 3ನೇ ಪಂದ್ಯವಾಗಲಿದೆ. ಈ ಪಂದ್ಯದ ವಿಶೇಷ ಎಂದರೆ ಕಳೆದ ಆವೃತ್ತಿಗಳಲ್ಲಿ ಆಡಿದ್ದ ಕೆಲವು ಆಟಗಾರರು ಈ ಬಾರಿ ಎದುರಾಳಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಲ್ 2014 ರಿಂದ​, ದೇವದತ್​ ಪಡಿಕ್ಕಲ್​ 2019ರಿಂದ ಮತ್ತು ನವದೀಪ್​ ಸೈನಿ 2018ರಿಂದ ಐಪಿಎಲ್​ನಲ್ಲಿ ರಾಯಲ್​​ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಈ ಮೂವರು ಆಟಗಾರರು ಶ್ರೀಮಂತ ಕ್ರಿಕೆಟ್​ ಲೀಗ್​ನಲ್ಲಿ ನೆಲೆ ಕಂಡುಕೊಂಡಿದ್ದರು, ಇದೀಗ ಮೂವರು ಇದೇ ಮೊದಲ ಬಾರಿಗೆ ಆರ್​ಸಿಬಿ ವಿರುದ್ಧವೇ ಕಣಕ್ಕಿಳಿಯಲಿದ್ದಾರೆ.

ಸೈನಿಯನ್ನು 2.6 ಕೋಟಿ ರೂಗಳಿಗೆ, ದೇವದತ್​ ಪಡಿಕ್ಕಲ್​ಗೆ 7.75 ಕೋಟಿ ಮತ್ತು ಚಹಲ್​ರನ್ನು 6.5 ಕೋಟಿ ರೂಗಳಿಗೆ ರಾಜಸ್ಥಾನ್​ ರಾಯಲ್ಸ್​ ಖರೀದಿಸಿದೆ. ಈ ಮೂವರು ಆಟಗಾರರು ಅತ್ಯುತ್ತುಮ ಫಾರ್ಮ್​ನಲ್ಲಿದ್ದು, ಇಂದಿನ ಪಂದ್ಯದಲ್ಲಿ ತಮ್ಮ ಮಾಜಿ ತಂಡ ಮಣಿಸುವುದಕ್ಕಾಗಿ ಆಡಲಿದ್ದಾರೆ. ಇವರಷ್ಟೇ ಅಲ್ಲದೆ ನೇಥನ್ ಕೌಲ್ಟರ್​ ನೈಲ್, ಶಿಮ್ರಾನ್​ ಹೆಟ್ಮಾಯರ್​ ಕೂಡ ಆರ್​ಸಿಬಿಯಲ್ಲಿ ಆಡಿದವರೇ.

ವಿಶೇಷವೆಂದರೆ ಕಳೆದ ಆವೃತ್ತಿಯಲ್ಲಿ ರಾಜಸ್ಥಾನ್​ ರಾಯಲ್ಸ್​ನಲ್ಲಿ ಆಡಿದ್ದ ಅನುಜ್ ರಾವತ್​ ಮತ್ತು ಮಹಿಪಾಲ್​ ಲಾಮ್ರೋರ್​ ಈ ಬಾರಿ ಆರ್​ಸಿಬಿ ಸೇರಿಕೊಂಡಿದ್ದಾರೆ. ಆದರೆ ಅನುಜ್ ಮಾತ್ರ ಆರ್​ಸಿಬಿ ಪರ ಡೆಬ್ಯೂಟ್​ ಮಾಡಿದ್ದಾರೆ.

ಸನ್​ರೈಸರ್ಸ್​ ಗೆಲುವಿಗೆ ಮುಳುವಾಗಿದ್ದ ಮಾಜಿ ಆಟಗಾರರು:ಸೋಮವಾರ ನಡೆದ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಲಖನೌ ಸೂಪರ್ ಜೈಂಟ್ಸ್​ ತಂಡ 12 ರನ್​ಗಳ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಹೈದರಾಬಾದ್​ ಮಾಜಿ ಆಟಗಾರರಾದ ಕೆಎಲ್ ರಾಹುಲ್, ದೀಪಕ್​ ಹೂಡ, ಮನೀಶ್ ಪಾಂಡೆ, ಜೇಸನ್ ಹೋಲ್ಡರ್​ ಕಣಕ್ಕಿಳಿದು ತಮ್ಮ ಮಾಜಿ ತಂಡವನ್ನು ಸೋಲಿಸಿದ್ದರು. ಇದೀಗ ಆರ್​ಸಿಬಿಗೂ ಅದೇ ಗತಿ ಆಗಬಹುದೇ ಎಂದು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ:ಕ್ವಾರಂಟೈನ್​ ಮುಗಿಸಿದ್ದರೂ ಇಂದಿನ ಪಂದ್ಯದಲ್ಲಿ ಮ್ಯಾಕ್ಸ್​ವೆಲ್ ಆಡುವುದಕ್ಕೆ ಅವಕಾಶವಿಲ್ಲ: ಕಾರಣ ಇಲ್ಲಿದೆ

ABOUT THE AUTHOR

...view details