ಆಕ್ಲೆಂಡ್ (ನ್ಯೂಜಿಲ್ಯಾಂಡ್): 'ನಿರ್ದಿಷ್ಟ ಮತ್ತು ವಿಶ್ವಾಸಾರ್ಹ' ಬೆದರಿಕೆ ಪಡೆದ ನಂತರವೂ ನಮ್ಮ ಕ್ರಿಕೆಟ್ ತಂಡವು ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಿರಲಿಲ್ಲ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ (NZC) ಮಂಡಳಿಯ ಸಿಇಒ ಡೇವಿಡ್ ವೈಟ್ ಹೇಳಿದ್ದಾರೆ.
18 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತಾ ದೃಷ್ಟಿಯಿಂದ ತಮ್ಮ ಪ್ರವಾಸ ರದ್ದುಪಡಿಸಿದೆ. ಸೆ.17ರಂದು ನ್ಯೂಜಿಲ್ಯಾಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಭದ್ರತಾ ಎಚ್ಚರಿಕೆ ಬಂದಿದ್ದರಿಂದ ಸರಣಿ ರದ್ದು ಮಾಡುವುದಾಗಿ ಕಿವೀಸ್ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ. 34 ಸದಸ್ಯರ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವು ಶನಿವಾರ ರಾತ್ರಿ ಚಾರ್ಟರ್ ವಿಮಾನದಲ್ಲಿ ಇಸ್ಲಾಮಾಬಾದ್‌ನಿಂದ ಹೊರಟು ದುಬೈ ತಲುಪಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ: ಭದ್ರತಾ ಕಾರಣಕ್ಕೆ ನ್ಯೂಜಿಲ್ಯಾಂಡ್-ಪಾಕ್ ಕ್ರಿಕೆಟ್ ಸರಣಿ ರದ್ದು