ಲೀಡ್ಸ್ :ಲಾರ್ಡ್ಸ್ನಲ್ಲಿ ಅದ್ವಿತೀಯ ಜಯ ಸಾಧಿಸಿದ ಹೊರೆತಾಗಿಯೂ ಭಾರತ ತಂಡದಲ್ಲಿರುವ ಕೆಲವು ದೌರ್ಬಲ್ಯಗಳನ್ನು ಇಂಗ್ಲೆಂಡ್ ನೆನಪಿನಲ್ಲಿಡಬೇಕಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ತಿಳಿಸಿದ್ದಾರೆ. ಜೊತೆಗೆ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತ ತಂಡದಲ್ಲಿ ಇನ್ನೂ ಕೆಲವು ದೌರ್ಬಲ್ಯಗಳಿವೆ. ಇದನ್ನು ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ಮತ್ತು ಸ್ಟುವರ್ಟ್ ಬ್ರಾಡ್ರನ್ನು ಇಂಗ್ಲೆಂಡ್ ಹೊಂದಿದ್ದರೆ, ಈ ಸರಣಿಯನ್ನು ಸುಲಭವಾಗಿ ಗೆಲ್ಲಲಿದೆ ಎಂದು ನಾನು ಬಲವಾಗಿ ಹೇಳುತ್ತಿದ್ದೆ.
ಆದರೂ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಮುಂದಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಿರುಗಿ ಬೀಳಲಿದೆ ಎಂದು ಹುಸೇನ್ ಡೈಲಿ ಮೇಲ್ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ನೀವು ಭಾರತ ತಂಡದ ಬ್ಯಾಟಿಂಗ್ ಲೈನ್ ಅಪ್ ನೋಡಿದಾಗ, ರಿಷಭ್ ಪಂತ್ ಒಬ್ಬರ ಅಪಾಯಕಾರಿ ಬ್ಯಾಟ್ಸ್ಮನ್ ಆಗಿ ಕಾಣುತ್ತಾರೆ.