ಲಂಡನ್: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅಂತ್ಯಕ್ರಿಯೆ ಮಾರ್ಚ್ 30 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದಿ ಹಂಡ್ರೆಡ್ ಡ್ರಾಫ್ಟ್ ಮತ್ತು ಮಹಿಳಾ ವಿಭಾಗದ 2ನೇ ಆವೃತ್ತಿಯ ಸರಣಿಯನ್ನು ಏರ್ಪಿಲ್ 5ಕ್ಕೆ ಮುಂದೂಡಲಾಗಿದೆ.
100 ಬಾಲ್‌ಗಳ ಕ್ರಿಕೆಟ್ ಟೂರ್ನಮೆಂಟ್ ದಿ ಹಂಡ್ರೆಡ್ ಡ್ರಾಫ್ಟ್ ಪುರುಷರ ಮತ್ತು ಮಹಿಳೆಯರ ತಂಡಗಳ ಆಯ್ಕೆ, ಹೆಸರುಗಳನ್ನು ಏಪ್ರಿಲ್ 5 ರಂದು ಪ್ರಕಟಿಸಲಾಗುತ್ತದೆ ದಿ ಹಂಡ್ರೆಡ್ ಹೇಳಿಕೆ ಬಿಡುಗಡೆ ಮಾಡಿದೆ. 15 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 145 ಟೆಸ್ಟ್‌ಗಳಲ್ಲಿ 708 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಲೆಗ್-ಸ್ಪಿನ್ ಬೌಲಿಂಗ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿರುವ ವಾರ್ನ್, ಮಾರ್ಚ್ 4 ರಂದು ಥಾಯ್ಲೆಂಡ್ನ ಕೊಹ್ ಸಮುಯಿಯಲ್ಲಿ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದರು.