ಪಂತ್ ಕಾರು ಅಪಘಾತಕ್ಕೆ ಕಾರಣವಾಗಿದ್ದ ಕಾಲುವೆ ತೆರವು ಕಾರ್ಯ ಡೆಹ್ರಾಡೂನ್(ಉತ್ತರಾಖಂಡ್): ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಡಿಸೆಂಬರ್ 30 ರಂದು ದೆಹಲಿಯಿಂದ ಉತ್ತರಾಖಂಡದ ಮನೆಗೆ ಮರಳುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿತ್ತು. ಸಮಯೋಚಿತವಾಗಿ ಕಾರಿನ ಕಿಟಕಿಯ ಗಾಜು ಒಡೆದು ಪಂತ್ ಪ್ರಾಣ ಉಳಿಸಿಕೊಂಡಿದ್ದರು.
ಈ ಅಪಘಾತಕ್ಕೆ ಅತಿವೇಗ, ನಿದ್ರೆ, ಹೊಂಡಗಳು ಹೀಗೆ ಹಲವಾರು ಕಾರಣಗಳನ್ನು ಹೇಳಲಾಗಿತ್ತು. ಆದರೆ ಅಪಘಾತ ಸಂಭವಿಸಿದ ಸ್ಥಳದಿಂದ 10 ಹೆಜ್ಜೆ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಹಾದು ಹೋಗಿರುವ ರಾಜಕಾಲುವೆ ಅಪಘಾತಕ್ಕೆ ದೊಡ್ಡ ಕಾರಣವಾಗಿತ್ತು. ಈ ಕಾಲುವೆಯಿಂದ ಕೇವಲ ಪಂತ್ ಕಾರು ಮಾತ್ರವಲ್ಲ, ಹಲವಾರು ವಾಹನಗಳು ಅಪಘಾತವಾಗಿದ್ದವು. ಈ ಕಾಲುವೆಯ ಬಗ್ಗೆ ಈಟಿವಿ ಭಾರತ ಗ್ರೌಂಡ್ ರಿಪೋರ್ಟ್ ಮಾಡಿತ್ತು ಮತ್ತು ಅಪಘಾತಕ್ಕೆ ಇದೇ ಕಾರಣ ಎಂದು ಭಿತ್ತರಿಸಿತ್ತು.
ಈ ಸ್ಥಳದಲ್ಲಿ ಇದು ಮೊದಲ ರಸ್ತೆ ಅಪಘಾತವಲ್ಲ, ಆದರೆ ಇದಕ್ಕೂ ಮೊದಲು ಇದೇ ಸ್ಥಳದಲ್ಲಿ ಹತ್ತಾರು ರಸ್ತೆ ಅಪಘಾತಗಳು ಸಂಭವಿಸಿವೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) ಮತ್ತು ನೀರಾವರಿ ಇಲಾಖೆ ನಡುವಣ ಕಲಹದಿಂದ ಆ ಕಾಲುವೆ ರಸ್ತೆಗೆ ಅಡ್ಡಲಾಗಿತ್ತು. ಅಲ್ಲದೇ ಮುಂದೆ ಕಾಲುವೆ ಇದೆ ಎಂಬುದರ ಬಗ್ಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೂಚನಾ ಫಲಕವೂ ಇರಲಿಲ್ಲ. ಈ ಬಗ್ಗೆ ಈ ಟಿವಿ ಭಾರತ ಕೂಲಂಕಶ ವರದಿ ಮಾಡಿತ್ತು. ಈಗ ಎನ್ಹೆಚ್ಎಐ ಮತ್ತು ನೀರಾವರಿ ಇಲಾಖೆಯ ಕಲಹ ಸರಿಯಾಗಿದ್ದು, ಕಾಲುವೆ ತೆಗರವು ಕಾರ್ಯ ಆರಂಭವಾಗಿದೆ.
ಕಾಲುವೆಯಿಂದ ಹಲವು ಅವಘಡಗಳು: ಹರಿದ್ವಾರ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಮುಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣಿನ ಒಡ್ಡು ನಿರ್ಮಾಣ ಮಾಡಲಾಗಿತ್ತು. ಅಪಘಾತ ಸ್ಥಳದಲ್ಲಿ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಈ ಹಿಂದೆ ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ದೆಹಲಿಯಿಂದ ಬರುವ ಯಾವುದೇ ವಾಹನವು 70 ಕ್ಕಿಂತ ಹೆಚ್ಚು ವೇಗದಲ್ಲಿರುತ್ತದೆ. ಒಮ್ಮೆಗೆ ಎದುರಾಗುವ ಕಾಲುವೆಯ ಮಣ್ಣಿನ ಒಡ್ಡಿನಿಂದ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುತ್ತಿತ್ತು.
ಪಂತ್ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಭೇಟಿ ನೀಡಿ ಪಂತ್ ಆರೋಗ್ಯ ವಿಚಾರಿಸಿದ್ದರು. ಈ ವೇಳೆ ಪಂತ್ ರಸ್ತೆ ಮಧ್ಯದಲ್ಲಿದ್ದ ಗುಂಡಿಯಿಂದ ಅಪಘಾತ ಸಂಭವಿಸಿರುವುದಾಗಿ ಹೇಳಿದ್ದರು. ದೆಹಲಿಯಿಂದ ರಾತ್ರಿ ಪಂತ್ ಒಬ್ಬರೇ ವೇಗವಾಗಿ ಬರುತ್ತಿದ್ದರು. ಒಮ್ಮೆಗೆ ಎದುರಿಗೆ ಒಡ್ಡು ಕಾಣಿಸಿದ್ದರಿಂದ ಕಾರನ್ನು ತಿತುಗಿಸಿದ್ದಾರೆ. ಈ ವೇಳೆ ಕಾರಿನ ಚಕ್ರ ಗುಂಡಿಗೆ ಬಿದ್ದು ನಿಯಂತ್ರಣ ತಪ್ಪಿತ್ತು.
ಗಮನ ನೀಡಿಲ್ಲ: ಕಾಮಗಾರಿ ಆರಂಭಕ್ಕೂ ಮುನ್ನ ನೀರಾವರಿ ಇಲಾಖೆ ಎನ್ಎಚ್ಎಐಗೆ ಪತ್ರ ಬರೆದು ಮುಂದಿನ 15 ದಿನ ಕಾಲುವೆ ನೀರು ನಿಲ್ಲಿಸಲಾಗುತ್ತಿದೆ. ಬಳಿಕ ಎನ್‌ಎಚ್‌ಎಐ ಮತ್ತು ನೀರಾವರಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾಮಗಾರಿ ನಡೆಸುತ್ತಿದ್ದಾರೆ. ಪಂತ್ ಅಪಘಾತದ ನಂತರ ಎರಡೂ ಇಲಾಖೆಗಳು ಮತ್ತು ವಿಶೇಷವಾಗಿ ನೀರಾವರಿ ಇಲಾಖೆ ಕ್ರಮ ಕೈಗೊಂಡಿರುವ ರೀತಿಯನ್ನು ನೋಡಿದರೆ ಈ ಇಲಾಖೆ ನಿರ್ಲಕ್ಷ್ಯ ಎಂದು ಕಾಣುತ್ತದೆ. ಈ ರಾಜಕಾಲುವೆಯನ್ನು ಹೆದ್ದಾರಿಯಿಂದ ಬೇರೆಡೆಗೆ ತಿರುಗಿಸಲು ನಿರಂತರ ಬೇಡಿಕೆ ಇತ್ತು. ಈಗ ರಸ್ತೆಯಲ್ಲಿ ಬರುವ ಈ ಕಾಲುವೆಯನ್ನು ಇನ್ನೊಂದು ದಿಕ್ಕಿನಲ್ಲಿ ಸುಮಾರು 4.5 ಮೀಟರ್ ತಿರುಗಿಸಲಾಗುತ್ತಿದೆ.
ರಸ್ತೆ ಅಗಲೀಕರಣ ಮಾಡಲಾಗುವುದು: ವರ್ಷಗಳ ಹಿಂದೆ ಎನ್‌ಎಚ್‌ಎಐ ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುವಾಗ ನೀರಾವರಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಇದರಿಂದ ಸರ್ವಿಸ್ ರಸ್ತೆ, ಹೆದ್ದಾರಿ ಸರಿಯಾಗಿ ನಿರ್ಮಾಣ ಮಾಡಲಾಗುವುದು ಇಲಾಖೆಗೆ ಮನವಿ ಮಾಡಿತ್ತು, ಆಗಲೂ ನೀರಾವರಿ ಇಲಾಖೆ ನಿರಾಕರಿಸಿತ್ತು.
ಎನ್‌ಎಚ್‌ಎಐ ಡಿಜಿಎಂ ರಾಘವ್ ಮಿಶ್ರಾ ಮಾತನಾಡಿ, ಈ ಕಾಲುವೆಯಿಂದಾಗಿ ರಸ್ತೆಯ ಹೆಚ್ಚಿನ ಭಾಗವನ್ನು ಅಗಲೀಕರಣ ಮಾಡಲಾಗುತ್ತಿಲ್ಲ. ಈಗ ಕಾಮಗಾರಿ ಆರಂಭವಾಗಿದೆ. ಆ ನಂತರ ಸರ್ವಿಸ್ ರಸ್ತೆ ಮತ್ತು ಹೆದ್ದಾರಿಯಲ್ಲಿ ಸಾಕಷ್ಟು ಬದಲಾವಣೆ ಕಾಣಲಿದೆ. ಆದಷ್ಟು ಬೇಗ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ಪಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಅಂಗಳಕ್ಕೆ ಇಳಿಯೋದು ಯಾವಾಗ ಸಿಡಿಲ ಮರಿ?