ಬ್ರಿಸ್ಬೇನ್:ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ಸಿಲುಕಿ ಆರಂಭದಲ್ಲೇ ಆಘಾತಕ್ಕೊಳಗಾಗಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯ ಪ್ರಥಮ ಪಂದ್ಯವು ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ಆರಂಭಗೊಂಡಿದೆ. ಆರಂಭಿಕರಾಗಿ ರೊರಿ ಬರ್ನ್ಸ್ ಹಾಗೂ ಹಮೀದ್ ಹಸೀಬ್ ಕಣಕ್ಕಿಳಿದರು. ಆದರೆ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ರೊರಿ ಬರ್ನ್ಸ್ರನ್ನು(0) ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್ ಆಸೀಸ್‌ಗೆ ಉತ್ತಮ ಆರಂಭ ನೀಡಿದರು.
ಬಳಿಕ ನಾಲ್ಕನೇ ಓವರ್ನಲ್ಲಿ 6(9 ಎಸೆತ) ರನ್ ಗಳಿಸಿ ಆಡುತ್ತಿದ್ದ ಡೇವಿಡ್ ಮಲನ್ ಅವರನ್ನು ಜೋಶ್ ಹ್ಯಾಜಲ್‌ವುಡ್ ಪೆವಿಲಿಯನ್ಗೆ ಅಟ್ಟಿದರು. ಇದಾದ ಬಳಿಕ ಕ್ರೀಸಿಗೆ ಬಂದ ನಾಯಕ ಜೋ ರೂಟ್(0) ಕೂಡ 9 ಎಸೆತ ಎದುರಿಸಿ ಖಾತೆ ತೆರೆಯದೆ ಹ್ಯಾಜಲ್‌ವುಡ್ ಬೌಲಿಂಗ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸಹ 5 ರನ್ ಬಾರಿಸಿ ನಾಯಕ ಕಮಿನ್ಸ್ಗೆ ಬಲಿಯಾದರು.
ಒಲಿ ಪೋಪ್ (1*) ಹಾಗೂ ಹಮೀದ್ ಹಸೀಬ್ 12 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.