ನವದೆಹಲಿ: ನಿವೃತ್ತ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳುವ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟೂರ್ನಮೆಂಟ್ನ 2ನೇ ಆವೃತ್ತಿಯಿಂದ ಭಾರತ ತಂಡದ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಆಡದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸಚಿನ್ ಸೇರಿದಂತೆ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ಕ್ರಿಕೆಟಿಗರಿಗೆ ಆಯೋಜಕರು ಒಪ್ಪಂದದ ಪ್ರಕಾರ ಹಣವನ್ನು ಸಂಪೂರ್ಣ ಪಾವತಿಸದ ಕಾರಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸಚಿನ್ ತೆಂಡೂಲ್ಕರ್ ಭಾರತ ಲೆಜೆಂಡ್ಸ್ ತಂಡದ ಪರ ನಾಯಕನಾಗಿ ಮೊದಲ ಆವೃತ್ತಿಯಲ್ಲಿ ಆಡಿದ್ದರು. ಭಾರತ ತಂಡ ಚಾಂಪಿಯನ್ ಆಗಿತ್ತು. ಆದರೆ ಒಪ್ಪಂದದ ಪ್ರಕಾರ ತಮಗೆ ಸೇರಬೇಕಾದಂತಹ ಹಣ ಪಾವತಿಯಾಗದ ಕಾರಣ, ಈ ಆವೃತ್ತಿಯ ಭಾಗವಾಗದಿರಲು ತೀರ್ಮಾನಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಈ ಟೂರ್ನಮೆಂಟ್ನ ಬ್ರಾಂಡ್ ಅಂಬಾಸಿಟರ್ ಕೂಡ ಆಗಿದ್ದರು.
ಬಾಂಗ್ಲಾದೇಶದ ಮಾಧ್ಯಮವೊಂದರ ವರದಿಯ ಪ್ರಕಾರ ಕಳೆದ ಆವೃತ್ತಿಯಲ್ಲಿ ಭಾಗವಹಿಸಿದ್ದ ಬಾಂಗ್ಲಾದೇಶ ಲೆಜೆಂಡ್ಸ್ ತಂಡದ ಖಲೀದ್ ಮಹ್ಮುದ್, ಖಲೀದ್ ಮಸುದ್, ಮಹ್ರಾಬ್ ಹುಸೇನ್, ರಜಿನ್ ಸಲೆಹ್, ಹನ್ನಾಮ್ ಸರ್ಕಾರ್ ಮತ್ತು ನಫೀಸ್ ಇಕ್ಬಾಲ್ಗೆ ಆಯೋಜಕರುಯಾವುದೇ ಹಣವನ್ನು ನೀಡಿಲ್ಲ ಎಂದು ತಿಳಿದುಬಂದಿದೆ.