ಮುಂಬೈ: ತಮ್ಮ ಫೋಟೋಗಳನ್ನು ಕಂಪ್ಯೂಟರ್ ಮೂಲಕ ಮಾರ್ಫ್ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಪ್ರಮೋಷನ್ ಮಾಡಿಕೊಳ್ಳುತ್ತಿರುವ ಕ್ಯಾಸಿನೋ ವಿರುದ್ಧ ಕಾನೂನಿನಾತ್ಮಕ ಕಮ್ರ ತೆಗೆದುಕೊಳ್ಳುವುದಾಗಿ ಗುರುವಾರ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಗೋವಾ ಮೂಲದ ಬಿಗ್ ಡ್ಯಾಡಿ ಎಂಬ ಕ್ಯಾಸಿನೋ ಸಚಿನ್ ತೆಂಡೂಲ್ಕರ್ ಅವರ ಫೋಟೋಗಳನ್ನು ತನ್ನ ಪ್ರಮೋಷನ್ಗಾಗಿ ಬಳಿಸಿಕೊಂಡಿದೆ ಎಂದು ತಿಳಿದುಬಂದಿದೆ. ನನ್ನ ಲೀಗಲ್ ಟೀಮ್ ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಆದರೆ, ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ನನಗೆ ಮುಖ್ಯ ಎಂದು ನಾನು ಭಾವಿಸಿದ್ದೇನೆ ಎಂದು ತೆಂಡೂಲ್ಕರ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲಾತಾಣಗಳಲ್ಲಿ ಹಲವಾರು ಜಾಹೀರಾತುಗಳನ್ನು ಪ್ರದರ್ಶನವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲಿ ನಾನು ಕ್ಯಾಸಿನೊವನ್ನು ಆಡುವುದಕ್ಕೆ ಪ್ರೇರೇಪಿಸುವಂತೆ ತೋರಿಸುವ ಮಾರ್ಫ್ ಮಾಡಿದ ಫೋಟೋಗಳಿವೆ ಎಂದು ಭಾರತದ ಲೆಜೆಂಡರಿ ಬ್ಯಾಟರ್ ತಿಳಿಸಿದ್ದಾರೆ.
ಮುಂದುವರಿಸಿರುವ 48 ವರ್ಷದ ಸಚಿನ್, ನಾನು ಎಂದಿಗೂ ಜೂಜು, ತಂಬಾಕು ಅಥವಾ ಆಲ್ಕೋಹಾಲ್ ಗಳಿಗೆ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ರಾಯಭಾರಿಯಾಗುವುದಿಲ್ಲ. ಈ ಜಾಹೀರಾತಿನಲ್ಲಿ ನನ್ನ ಫೋಟೋ ಬಳಸಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವುದು ನನಗೆ ತುಂಬಾ ನೋವು ತಂದಿದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:Ranji Trophy: ಜಮ್ಮು ಕಾಶ್ಮೀರದ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್