ಮುಂಬೈ: ರಾಯಲ್ ಚಾಲೆಂರ್ಸ್ ಬೆಂಗಳೂರು ಐಪಿಎಲ್ನ ಅಭಿಮಾನಿಗಳಿಗೆ ರಂಜಿಸುವ ತಂಡದಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಟ್ರೋಫಿ ಎತ್ತಿ ಹಿಡಿಯದ ನ್ಯೂನತೆಯೊಂದನ್ನು ಹೊರೆತುಪಡಿಸಿದರೆ, ದಾಖಲೆಗಳ ವಿಷಯದಲ್ಲಿ ಬೆಂಗಳೂರು ಫ್ರಾಂಚೈಸಿ ಅಗ್ರಸ್ಥಾನದಲ್ಲಿರುತ್ತದೆ. ಹಾಗೆಯೇ ಕೆಲವೊಂದು ಕಳಪೆ ದಾಖಲೆಗಳಲ್ಲೂ ಕೂಡ ಆರ್ಸಿಬಿ ಅಗ್ರ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಆರ್ಸಿಬಿ ಕಳೆದ 14 ಆವೃತ್ತಿಗಳಲ್ಲಿ 20 ಬಾರಿ 200ರ ಗಡಿ ದಾಟುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇದಲ್ಲದೇ 263 ರನ್ಗಳಿಸುವ ಮೂಲಕ ಗರಿಷ್ಠ ಮೊತ್ತದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಸಿಎಸ್ಕೆ 19 ಬಾರಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದೆ. ಪ್ರಸ್ತುತ ಸಕ್ರಿಯರಾಗಿರುವ ತಂಡಗಳಲ್ಲಿ ಡೆಲ್ಲಿ ಕೊನೆಯ ಸ್ಥಾನದಲ್ಲಿದ್ದು ಕೇವಲ 7 ಬಾರಿ 200 ರನ್ಗಳಿಸಿದೆ.