ಕರ್ನಾಟಕ

karnataka

ETV Bharat / sports

ಅಫ್ಘಾನ್​​ ಜೊತೆಗಿನ ಕ್ರಿಕೆಟ್‌ಗೆ​ ಬಹಿಷ್ಕಾರ ಹಾಕಿ: ಆಸೀಸ್​​ ಟೆಸ್ಟ್​ ನಾಯಕ ಟಿಮ್​ ಪೈನ್ - ಆಸ್ಟ್ರೇಲಿಯಾ ಕ್ಯಾಪ್ಟನ್​ ಟಿಮ್​ ಪೈನ್​

ಅಫ್ಘಾನಿಸ್ತಾನದಲ್ಲಿ ಮಹಿಳಾ ಕ್ರಿಕೆಟ್​ ನಿಷೇಧ ಮಾಡುತ್ತಿದ್ದಂತೆ ಕ್ರಿಕೆಟ್​​ ಆಸ್ಟ್ರೇಲಿಯಾ ತಿರುಗಿಬಿದ್ದಿದೆ. ಇದರ ಬೆನ್ನಲ್ಲೇ ಟೆಸ್ಟ್​ ತಂಡದ ಕ್ಯಾಪ್ಟನ್​ ಟಿಮ್ ಪೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

tim paine
tim paine

By

Published : Sep 10, 2021, 4:49 PM IST

ಮೆಲ್ಬೋರ್ನ್​​(ಆಸ್ಟ್ರೇಲಿಯಾ):ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​ ಸರ್ಕಾರದ ಆಡಳಿತ ಶುರುವಾಗುತ್ತಿದ್ದಂತೆ ಮಹಿಳಾ ಕ್ರಿಕೆಟ್​ ಸೇರಿದಂತೆ ಇತರೆ ಕ್ರೀಡೆಗಳನ್ನು ಆಡಲು ಮಹಿಳೆಯರಿಗೆ ಅನುಮತಿ ನೀಡುವುದಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ.

ಇದಕ್ಕೆ ಆಕ್ರೋಶ​ ವ್ಯಕ್ತಪಡಿಸಿರುವ ಕ್ರಿಕೆಟ್​ ಆಸ್ಟ್ರೇಲಿಯಾ, ಒಂದು ವೇಳೆ ತಾಲಿಬಾನ್​​ ಮಹಿಳಾ ಕ್ರಿಕೆಟ್ ಬ್ಯಾನ್​ ಮಾಡಿದ್ರೆ, ಅಫ್ಘಾನಿಸ್ತಾನ ಪುರುಷ ತಂಡದೊಂದಿಗೆ ನಡೆಯಬೇಕಿರುವ ಏಕೈಕ ಟೆಸ್ಟ್​ ಪಂದ್ಯ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಟೆಸ್ಟ್​ ತಂಡದ ಕ್ಯಾಪ್ಟನ್ ಟಿಮ್​ ಪೈನ್ ಕೂಡ ಮಹತ್ವದ ಹೇಳಿಕೆ ನೀಡಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್​​​ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡುವಂತೆ ಅವರು ಹೇಳಿದ್ದಾರೆ. ಟೆಸ್ಟ್​​ ಸ್ಥಾನಮಾನ ಹೊಂದಿರುವ ರಾಷ್ಟ್ರಗಳು, ಸಕ್ರಿಯ ಮಹಿಳಾ ತಂಡ ಹೊಂದಿರಬೇಕು. ಆದರೆ ಅಫ್ಘಾನಿಸ್ತಾನ ಇದಕ್ಕೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ವಿಶ್ವಕಪ್​ನಲ್ಲಿ ಪುರುಷ ತಂಡ ಕೂಡ ಭಾಗಿಯಾಗದಂತೆ ಐಸಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಪೋರ್ಟ್ಸ್​ ರೇಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಆಸ್ಟ್ರೇಲಿಯಾದ ಆಟಗಾರರು, ಕ್ರಿಕೆಟ್​​ ಆಸ್ಟ್ರೇಲಿಯಾ ನಿಲುವಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಅಫ್ಘಾನಿಸ್ತಾನದ ವಿಚಾರವಾಗಿ ಪ್ರತಿವೊಂದು ತಂಡವೂ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಹಿಳಾ ಕ್ರಿಕೆಟ್​ ನಿಷೇಧಿಸಿದ್ರೆ ಪುರುಷ ತಂಡದ ಜೊತೆ ನಾವು ಟೆಸ್ಟ್​ ಆಡಲ್ಲ: ತಾಲಿಬಾನ್​ಗೆ ಆಸ್ಟ್ರೇಲಿಯಾ ಎಚ್ಚರಿಕೆ

ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ಟಿ-20 ವಿಶ್ವಕಪ್​ಗೆ ಅಫ್ಘಾನಿಸ್ತಾನ ತಂಡ ಪ್ರಕಟಗೊಂಡಿದ್ದು, ನಾಯಕತ್ವ ಸ್ಥಾನಕ್ಕೆ ರಶೀದ್ ಖಾನ್​ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಅಫ್ಘಾನ್​ ಕ್ರಿಕೆಟ್ ಮಂಡಳಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್​ ತಂಡದ ಕ್ಯಾಪ್ಟನ್​ ಕೂಡ ತಮ್ಮ ಹೇಳಿಕೆ ನೀಡಿದ್ದು, ಇದಕ್ಕೆ ಐಸಿಸಿ ಹಾಗೂ ಇತರೆ ದೇಶದ ತಂಡಗಳು ಯಾವ ರೀತಿಯಾಗಿ ಪ್ರತಿಕ್ರಿಯೆ ನೀಡಲಿವೆ ಎಂಬುದನ್ನ ಕಾಯ್ದುನೋಡಬೇಕಿದೆ.

ABOUT THE AUTHOR

...view details