ಕರ್ನಾಟಕ

karnataka

ETV Bharat / sports

ಕೊಹ್ಲಿಗೆ ಯಾವುದೇ ಆತ್ಮವಿಶ್ವಾಸದ ಅಗತ್ಯವಿಲ್ಲ, ಅವರ ಫಾರ್ಮ್ ಬಗ್ಗೆ ​ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ರೋಹಿತ್ ಶರ್ಮಾ - Kohli farm

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 96 ರನ್​ಗಳಿಂದ ಗೆದ್ದು, 3-0ಯಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ ಮಾಜಿ ನಾಯಕ ವಿರಾಟ್​ ಕೊಹ್ಲಿ ಮೂರು ಪಂದ್ಯಗಳಲ್ಲಿ 8, 18 ಮತ್ತು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು.

ಕೊಹ್ಲಿಗೆ ಯಾವುದೇ ಆತ್ಮವಿಶ್ವಾಸದ ಅಗತ್ಯವಿಲ್ಲ, ಅವರ ಫಾರ್ಮ್ ಬಗ್ಗೆ ​ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ರೋಹಿತ್ ಶರ್ಮಾ
ಕೊಹ್ಲಿಗೆ ಯಾವುದೇ ಆತ್ಮವಿಶ್ವಾಸದ ಅಗತ್ಯವಿಲ್ಲ, ಅವರ ಫಾರ್ಮ್ ಬಗ್ಗೆ ​ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ರೋಹಿತ್ ಶರ್ಮಾ

By

Published : Feb 12, 2022, 1:07 PM IST

ಅಹ್ಮದಾಬಾದ್​: ವಿರಾಟ್​ ಕೊಹ್ಲಿ ಶತಕ ಗಳಿಸದೇ ಇರಬಹುದು ಆದರೆ ಅವರು ಫಾರ್ಮ್​ ಕಳೆದುಕೊಂಡಿಲ್ಲ, ಅವರ ಫಾರ್ಮ್​ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲದೇ ಅವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯಾವುದೇ ಸಲಹೆ ಬೇಕಿಲ್ಲ ಎಂದು ನಾಯಕ ರೋಹಿತ್ ಶರ್ಮಾ ವಿಂಡೀಸ್​ ವಿರುದ್ಧದ ಕೊನೆಯ ಪಂದ್ಯ ಗೆದ್ದ ಬಳಿಕ ಹೇಳಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ತಂಡ 96 ರನ್​ಗಳಿಂದ ಗೆದ್ದು, 3-0ದಿಂದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಆದರೆ, ಮಾಜಿ ನಾಯಕ ವಿರಾಟ್​ ಕೊಹ್ಲಿ ಮೂರು ಪಂದ್ಯಗಳಲ್ಲಿ 8, 18 ಮತ್ತು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದರು. ಕೊಹ್ಲಿಗೆ ಆತ್ಮವಿಶ್ವಾಸ ಕೊರತೆಯಿದೆಯೇ? ಎಂದು ಕೇಳಿದ್ದಕ್ಕೆ ರೋಹಿತ್​ ಶರ್ಮಾ ಅದರ ಅಗತ್ಯವಿಲ್ಲ ಎಂದಿದ್ದಾರೆ.

ವಿರಾಟ್​ ಕೊಹ್ಲಿಗೆ ಆತ್ಮವಿಶ್ವಾಸದ ಅಗತ್ಯವಿದೆಯೇ? ಒಂದು ವೇಳೆ ಕೊಹ್ಲಿಗೆ ಆತ್ಮವಿಶ್ವಾಸದ ಅಗತ್ಯವಿದೆ ಎಂದರೆ, ತಂಡದಲ್ಲಿ ಮತ್ಯಾರು ವಿಶ್ವಾಸ ಹೊಂದಿದ್ದಾರೆ? ಅವರು ದೀರ್ಘಕಾಲದಿಂದ ಶತಕ ಗಳಿಸದೇ ಇರಬಹುದು, ಆದರೆ ಅವರು ಅರ್ಧಶತಕಗಳನ್ನು ಗಳಿಸುತ್ತಿದ್ದಾರೆ ಎಂದು ನನಗೆ ತಿಳಿದಿದೆ.

ದಕ್ಷಿಣ ಆಫ್ರಿಕಾದಲ್ಲಿಯೂ ಅವರು 3 ಪಂದ್ಯಗಳಲ್ಲಿ 2 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗಾಗಿ ಅವರಿಗೆ ಯಾವುದೇ ಹೆಚ್ಚುವರಿ ಆತ್ಮವಿಶ್ವಾಸದ ಅಗತ್ಯವಿಲ್ಲ. ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಟೀಮ್ ಮ್ಯಾನೇಜ್​ಮೆಂಟ್ ಅವರ ಫಾರ್ಮ್​ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ:590 ಪ್ಲೇಯರ್ಸ್​, 561. 5ಕೋಟಿ ರೂ... IPL ಮೆಗಾ ಹರಾಜು ಬಗ್ಗೆ ಕ್ರಿಕೆಟ್ ಪ್ರೇಮಿಗಳು ತಿಳಿದುಕೊಳ್ಳಬೇಕಾಗಿದ್ದೇನು!?

ABOUT THE AUTHOR

...view details