ಕರ್ನಾಟಕ

karnataka

ETV Bharat / sports

ಸಪ್ತ ವಿಜಯದ ಸಂಭ್ರಮ... ಏಷ್ಯಾ ಕಪ್​ ಟ್ರೋಫಿ ಗೆದ್ದ ಖುಷಿಗೆ ಭಾರತ ವನಿತೆಯರ ಡ್ಯಾನ್ಸ್​ - Celebrating the victory of final match win

ಎಂಟನೇ ಆವೃತ್ತಿಯ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತದ ವನಿತೆಯರು 7ನೇ ಬಾರಿಗೆ ಟ್ರೋಪಿ ಜಯಿಸಿದ್ದು, ಸಂಭ್ರಮದಲ್ಲಿ ಮೈದಾನದಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ.

celebrations-after-womens-asia-cup
ಸಪ್ತ ವಿಜಯದ ಸಂಭ್ರಮ

By

Published : Oct 16, 2022, 10:31 AM IST

ಶ್ರೀಲಂಕಾ ತಂಡವನ್ನು ಬಗ್ಗುಬಡಿದು ಏಳನೇ ಬಾರಿಗೆ ಏಷ್ಯಾ ಕಪ್​ ಎತ್ತಿಹಿಡಿದ ಭಾರತದ ವನಿತೆಯರು ದಾಖಲೆ ಬರೆದರು. 8 ನೇ ಅವತರಣಿಕೆಯ ಏಷ್ಯಾಕಪ್​ನಲ್ಲಿ ಭಾರತ 7 ಬಾರಿ ಪ್ರಶಸ್ತಿ ಜಯಿಸಿದೆ. ಅದರಲ್ಲೂ 5 ನೇ ಸಲ ಶ್ರೀಲಂಕಾವನ್ನು ಮಣಿಸಿರುವುದು ವಿಶೇಷವಾಗಿದೆ.

ಭಾರತದ ಪುರುಷರು ಕೂಡ 7 ಬಾರಿ ಪ್ರಶಸ್ತಿ ಜಯಿಸಿದ್ದಾರೆ. ವನಿತೆಯರೂ ಕೂಡ ಸತತ ಬಾರಿ ಸೇರಿ 7 ಸಲ ಟ್ರೋಫಿ ಗೆದ್ದಿದ್ದಾರೆ. ಇದು ಮಹಿಳಾ ಕ್ರಿಕೆಟ್​ನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಫೈನಲ್​ ಪಂದ್ಯದ ಗೆಲುವಿನ ಬಳಿಕ ಭಾರತದ ಮಹಿಳಾ ಕ್ರಿಕೆಟಿಗರು ಸಂತಸದಿಂದ ಕುಣಿದಾಡಿದ ವಿಡಿಯೋ ವೈರಲ್​ ಆಗಿದೆ.

ಗೆದ್ದ ಖುಷಿಯಲ್ಲಿ ಮ್ಯೂಸಿಕ್​ಗೆ ವನಿತೆಯರು ಹೆಜ್ಜೆ ಹಾಕಿದ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಗೆಲುವಿನ ಬಳಿಕ ಸಂಭ್ರಮ ಹೀಗಿರುತ್ತದೆ ಎಂದು ಬರೆದುಕೊಂಡಿದೆ.

ಎಲ್ಲ ಆಟಗಾರ್ತಿಯರು ಸುತ್ತಲೂ ನಿಂತಿದ್ದು, ಟ್ರೋಫಿಯನ್ನು ಮಧ್ಯದಲ್ಲಿ ಇಡಲಾಗಿದೆ. ಟ್ರೋಫಿ ಜಯಿಸಿದ ಗತ್ತಿನಲ್ಲಿ ನಿಂತಿದ್ದು, ತಕ್ಷಣವೇ ಖುಷಿಯಿಂದ ಕೇಕೆ ಹಾಕುತ್ತಾ ಡ್ಯಾನ್ಸ್​ ಮಾಡುತ್ತಿರುವುದು ವಿಡಿಯೋದಲ್ಲಿದೆ.

ಇನ್ನು ಶ್ರೀಲಂಕಾ ನೀಡಿದ 65 ರನ್​ಗಳ ಸಾಧಾರಣ ಗುರಿಯನ್ನು 8.3 ಓವರ್​ಗಳಲ್ಲಿ ಭಾರತ ದಾಟಿತು. ಬ್ಯಾಟಿಂಗ್​ನಲ್ಲಿ ಮಿಂಚಿದ ಮಂದಾನಾ 51 ರನ್​ ಬಾರಿಸಿದರು. ಭಾರತದ ಬೌಲರ್​ಗಳಾದ ರೇಣುಕಾ ಸಿಂಗ್ 3 ಓವರ್‌ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರೆ, ಸ್ಪಿನ್ನರ್‌ಗಳಾದ ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ 2 ವಿಕೆಟ್ ಪಡೆದು ಶ್ರೀಲಂಕಾದ ಪತನಕ್ಕೆ ಕಾರಣವಾದರು.

ಓದಿ:ಭಾರತಕ್ಕೆ ಸುಲಭ ತುತ್ತಾದ ಲಂಕಾ.. ಏಳನೇ ಬಾರಿ ಏಷ್ಯಾಕಪ್​ ಮುಡಿಗೇರಿಸಿಕೊಂಡ ಭಾರತೀಯ ವನಿತೆಯರು

ABOUT THE AUTHOR

...view details