ಕರ್ನಾಟಕ

karnataka

ETV Bharat / sports

ಓವಲ್‌ನಲ್ಲಿ 50 ವರ್ಷಗಳ ನಂತ್ರ ಟೀಂ ಇಂಡಿಯಾಗೆ ಐತಿಹಾಸಿಕ ಜಯ: ಮರುಕಳಿಸಿದ ಗಬ್ಬಾ ವಿಜಯ - ಇಂಗ್ಲೆಂಡ್​ ಟೆಸ್ಟ್​

ಆಸ್ಟ್ರೇಲಿಯಾದ ಗಬ್ಬಾ ಮೈದಾನದಲ್ಲಿ ಗೆಲುವು ಸಾಧಿಸಿರುವ ರೀತಿಯಲ್ಲೇ ಇಂಗ್ಲೆಂಡ್​​ನ ಓವಲ್ ಮೈದಾನದಲ್ಲೂ ಕೊಹ್ಲಿ ಪಡೆ ಗೆಲುವಿನ ನಗೆಬೀರಿ, ಐತಿಹಾಸಿಕ ಸಾಧನೆ ಮಾಡಿತು.

Team india
Team india

By

Published : Sep 6, 2021, 9:27 PM IST

Updated : Sep 6, 2021, 9:48 PM IST

ಓವಲ್(ಇಂಗ್ಲೆಂಡ್​​)​: ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆದ 4ನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಓವಲ್​ ಮೈದಾನದಲ್ಲಿ ಇತಿಹಾಸ ನಿರ್ಮಿಸಿದೆ. ಜೊತೆಗೆ 1971ರ ಬಳಿಕ ಈ ಮೈದಾನದಲ್ಲಿ ಭಾರತಕ್ಕೆ ಸಿಕ್ಕಿರುವ ಎರಡನೇ ಜಯಭೇರಿ ಇದಾಗಿದೆ. ಈ ಪಂದ್ಯದಲ್ಲಿ ಕೊಹ್ಲಿ ಪಡೆ 157ರನ್​ಗಳ ಗೆಲುವು ಸಾಧಿಸಿದೆ.

ಓವಲ್​ ಮೈದಾನದಲ್ಲಿ ಟೀಂ ಇಂಡಿಯಾ ಸಂಭ್ರಮ

ಓವಲ್‌ನಲ್ಲಿ 13 ಟೆಸ್ಟ್​ ಪಂದ್ಯ, ಸಿಕ್ಕಿದ್ದು ಒಂದೇ ಜಯ!

ಭಾರತ-ಇಂಗ್ಲೆಂಡ್​ ಇಲ್ಲಿಯವರೆಗೆ 13 ಟೆಸ್ಟ್​ಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಆತಿಥೇಯ ತಂಡ 5ರಲ್ಲಿ ಜಯ ಸಾಧಿಸಿದ್ದರೆ, ಭಾರತ ತಂಡ ಕೇವಲ ಒಂದರಲ್ಲಿ ಜಯ ಸಾಧಿಸಿದೆ. 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಆದರೆ ಇದೀಗ ನಡೆದ ಪಂದ್ಯದಲ್ಲಿ ಗೆದ್ದು ಮಹತ್ವದ ಸಾಧನೆ ಮಾಡಿದೆ.

ಇಂಗ್ಲೆಂಡ್​ ಬ್ಯಾಟ್ಸ್‌ಮನ್ ವಿಕೆಟ್​​ ಪತನ

1971ರಲ್ಲಿ ಭಾರತಕ್ಕೆ ಜಯ, ಅಲ್ಲಿಂದ ಬರೀ ಸೋಲು!

ಭಾರತ ತಂಡ 1971ರ ಪ್ರವಾಸದಲ್ಲಿ ಕೊನೆಯ ಬಾರಿ ಆಂಗ್ಲರಿಗೆ ಸೋಲುಣಿಸಿತ್ತು. ಅಜಿತ್ ವಾಡೇಕರ್​ ನಾಯಕತ್ವದಲ್ಲಿ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದ ಭಾರತ 4 ವಿಕೆಟ್​ಗಳಿಂದ ಮಣಿಸಿತ್ತು. ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ 355 ಮತ್ತು 2ನೇ ಇನ್ನಿಂಗ್ಸ್​ನಲ್ಲಿ 101 ರನ್​ಗಳಿಸಿತ್ತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 284 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ್ದ 173 ರನ್​ಗಳ ಟಾರ್ಗೆಟ್​ ಅನ್ನು ಯಶಸ್ವಿಯಾಗಿ ಬೆನ್ನತ್ತಿ ಜಯ ಸಾಧಿಸಿತ್ತು.

ವಿಕೆಟ್​ ಕಿತ್ತ ಶಾರ್ದೂಲ್ ಠಾಕೂರ್​​

ನಂತರ 1982, 1990, 2002, 2007ರಲ್ಲಿ ನಡೆದ ಟೆಸ್ಟ್​ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದ್ದವು. ಆದರೆ, 2011ರ ಪ್ರವಾಸದಲ್ಲಿ ಭಾರತ ತಂಡ ಇನ್ನಿಂಗ್ಸ್​ ಮತ್ತು 8 ರನ್​, 2014ರಲ್ಲಿ ಇನ್ನಿಂಗ್ಸ್​ ಮತ್ತು 244 ರನ್​ ಹಾಗೂ 2018ರಲ್ಲಿ 118 ರನ್​ಗಳ ಸೋಲು ಕಂಡಿತು. ಕಳೆದ ಮೂರು ಪ್ರವಾಸದಲ್ಲಿ ಹೀನಾಯ ಸೋಲು ಕಂಡಿರುವ ಭಾರತ ತಂಡದ ವಿರುದ್ಧ ಈ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ, ಭಾರತ ಕಳೆದ 2-3 ವರ್ಷಗಳಿಂದ ವಿದೇಶಗಳಲ್ಲಿ ಅಚ್ಚರಿಯ ಜಯ ಸಾಧಿಸಿದ ದಾಖಲೆ ಹೊಂದಿದೆ. 32 ವರ್ಷಗಳಿಂದ ಗಬ್ಬಾದಲ್ಲಿ ಸೋಲೇ ಕಾಣದಿದ್ದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದಲ್ಲದೇ ಸರಣಿ ಗೆದ್ದು ತೋರಿಸಿತು.

ಶಾರ್ದೂಲ್​-ಪಂತ್​ ಉತ್ತಮ ಜೊತೆಯಾಟ

ಇನ್ನಿಂಗ್ಸ್​​​ ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ಗೆಲುವು

ಓವಲ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 191 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಇಂಗ್ಲೆಂಡ್​ 290 ರನ್​ಗಳಿಕೆ ಮಾಡಿ 99 ರನ್​ಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟ್​ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿತ್ತು.

ಆರಂಭಿಕ ಆಟಗಾರ ರೋಹಿತ್ ಶರ್ಮಾ 127ರನ್​​, ಠಾಕೂರ್​​​ 60 ಹಾಗೂ ರಿಷಭ್ ಪಂತ್​ 50 ರನ್​ಗಳಿಕೆ ಮಾಡಿ ತಂಡ 466 ರನ್​ಗಳಿಕೆ ಮಾಡುವಂತೆ ಮಾಡಿತ್ತು. ಜೊತೆಗೆ 368 ರನ್​ಗಳ ಗುರಿ ನೀಡಿತ್ತು. ಆದರೆ ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್​ ಕೇವಲ 210 ರನ್​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಕಂಡಿದೆ.

ಬೌಲಿಂಗ್​ನಲ್ಲಿ ಮಿಂಚಿದ ಜಸ್ಪ್ರೀತ್ ಬುಮ್ರಾ

ಇದನ್ನೂ ಓದಿ: RCBಗೆ ಆನೆ ಬಲ.. ದುಬೈನಲ್ಲಿ ತಂಡ ಸೇರಿಕೊಂಡ ಎಬಿ ಡಿವಿಲಿಯರ್ಸ್​​..

ಇದರ ಬೆನ್ನಲ್ಲೇ ಬೌಲಿಂಗ್​ನಲ್ಲಿ ಮಿಂಚಿದ ಟೀಂ ಇಂಡಿಯಾ ಇಂಗ್ಲೆಂಡ್​ ಬ್ಯಾಟ್ಸ್‌ಮನ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

Last Updated : Sep 6, 2021, 9:48 PM IST

ABOUT THE AUTHOR

...view details