ಕರ್ನಾಟಕ

karnataka

ETV Bharat / sports

India Tour of Ireland: ಭಾರತ ಐರ್ಲೆಂಡ್​ ಪ್ರವಾಸ, ಮೂರು ಟಿ20 ಸರಣಿಯ ವೇಳಾಪಟ್ಟಿ ಪ್ರಕಟ - ಈಟಿವಿ ಭಾರತ ಕನ್ನಡ

ವೆಸ್ಟ್​ ಇಂಡೀಸ್​ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ವೇಳಾಪಟ್ಟಿ ಈ ಕೆಳಗಿನಂತಿದೆ.

ಭಾರತ ಐರ್ಲೆಂಡ್​ ಪ್ರವಾಸ
ಭಾರತ ಐರ್ಲೆಂಡ್​ ಪ್ರವಾಸ

By

Published : Jun 28, 2023, 11:10 AM IST

ಡಬ್ಲಿನ್​: ವೆಸ್ಟ್​ ಇಂಡೀಸ್​ ಪ್ರವಾಸದ ಬಳಿಕ ಆಗಸ್ಟ್​ನಲ್ಲಿ ಭಾರತ ಪುರುಷರ ಕ್ರಿಕೆಟ್​ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲ್ಲಿದ್ದು, ಮೂರು ಪಂದ್ಯಗಳ T20 ಸರಣಿಯನ್ನು ಆಡಲಿದೆ ಎಂದು ಕ್ರಿಕೆಟ್ ಐರ್ಲೆಂಡ್ ದೃಢಪಡಿಸಿರುವುದಾಗಿ ಐಸಿಸಿ ಮಂಗಳವಾರ ಪ್ರಕಟಿಸಿದೆ. ಸರಣಿಯ ವೇಳಾಪಟ್ಟಿಯನ್ನೂ ಅಂತಿಮಗೊಳಿಸಲಾಗಿದೆ.

ಭಾರತ, ಐರ್ಲೆಂಡ್ ನಡುವಿನ ಎಲ್ಲ ಮೂರು ಪಂದ್ಯಗಳು ಐರ್ಲೆಂಡ್​ ರಾಜಧಾನಿ ಡಬ್ಲಿನ್‌ನ ಮಲಾಹೈಡ್‌ನಲ್ಲಿ ಆಗಸ್ಟ್ 18 ರಿಂದ 23ರ ವರೆಗೆ ನಡೆಯಲಿವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ ಪ್ರವಾಸದ ಬಳಿಕ ಭಾರತ ತಂಡ ಐರ್ಲೆಂಡ್​ಗೆ ಪ್ರವಾಸ ಕೈಗೊಳ್ಳಲಿದೆ.

ಈ ಬಗ್ಗೆ ಕ್ರಿಕೆಟ್ ಐರ್ಲೆಂಡ್‌ನ ಮುಖ್ಯ ಕಾರ್ಯನಿರ್ವಾಹಕ ವಾರೆನ್ ಡ್ಯುಟ್ರೋಮ್ ಪ್ರತಿಕ್ರಿಯ ನೀಡಿದ್ದು, "12 ತಿಂಗಳ ನಂತರ ಎರಡನೇ ಬಾರಿಗೆ ಭಾರತ ತಂಡ ಐರ್ಲೆಂಡ್‌ಗೆ ಆಗಮಿಸಲಿದೆ. ಅವರನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. 2022 ರಲ್ಲಿ ಎರಡು ಪಂದ್ಯಗಳನ್ನು ಆಡಿದ್ದ ಭಾರತ ಈ ವರ್ಷ ಐರ್ಲೆಂಡ್​ ವಿರುದ್ಧ ಮೂರು ಪಂದ್ಯಗಳ T-20 ಸರಣಿಯನ್ನು ಆಡಲಿದೆ. ಈ ಸ್ಮರಣೀಯ ಸರಣಿಯನ್ನು ಆನಂದಿಸಲು ಹೆಚ್ಚಿನ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ".

"ಭಾರತೀಯ ತಂಡದ ಬಿಡುವಿಲ್ಲದ ಪ್ರವಾಸದ ನಡುವೆಯೂ ಐರ್ಲೆಂಡ್​ನೊಂದಿಗೆ ಸರಣಿ ಆಯೋಜಿಸಿರುವುದಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಗೆ ನಮ್ಮ ಧನ್ಯವಾದಗಳು. ಹಾಗೆಯೆ ಅಭಿಮಾನಿ ಸ್ನೇಹಿ ವೇಳಾಪಟ್ಟಿ ಖಚಿತ ಪಡಿಸಲಾಗಿದ್ದು, ಶುಕ್ರವಾರ ಮತ್ತು ಭಾನುವಾರದಂದು ಪಂದ್ಯಗಳು ನಡೆಯಲಿವೆ. ವಾರಾಂತ್ಯವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬರಲಿದ್ದಾರೆ ಇದಕ್ಕಾಗಿ ಧನ್ಯವಾದ" ಎಂದು ಹೇಳಿದರು.

ಐರ್ಲೆಂಡ್​ vs ಭಾರತ T20 ವೇಳಾಪಟ್ಟಿ

  • 18 ಆಗಸ್ಟ್​ : ಮೊದಲ ಪಂದ್ಯ - ಮಲಾಹೈಡ್‌
  • 20 ಆಗಸ್ಟ್​ : ಎರಡನೇ ಪಂದ್ಯ - ಮಲಾಹೈಡ್‌
  • 23 ಆಗಸ್ಟ್​ : ಮೂರನೇ ಪಂದ್ಯ - ಮಲಾಹೈಡ್‌

ಇದಕ್ಕೂ ಮೊದಲು ವೆಸ್ಟ್​​ ಇಂಡೀಸ್​ ಪ್ರವಾಸ ಕೈಗೊಳ್ಳಲಿರುವ ಭಾರತ ಜುಲೈ 12 ರಿಂದ ಆಗಸ್ಟ್ 13 ರವರೆಗೆ ವಿಂಡೀಸ್​ ವಿರುದ್ದ 2 ಟೆಸ್ಟ್, 3 ಏಕದಿನ, 5-T20 ಪಂದ್ಯಗಳ ಸರಣಿಯನ್ನು ಆಡಲಿದೆ. ಈಗಾಗಲೇ ಪ್ರವಾಸದ ವೇಳಾಪಟ್ಟಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (CWI) ಪ್ರಕಟಿಸಿದೆ. ಭಾರತ ಈ ಹಿಂದೆ 2019ರಲ್ಲಿ ಎಲ್ಲಾ ಮಾದರಿಯ ಸರಣಿಗಾಗಿ ವೆಸ್ಟ್ ಇಂಡೀಸ್‌ ಪ್ರವಾಸ ಕೈಗೊಂಡಿತ್ತು. ಎಲ್ಲ ಮಾದರಿಯಲ್ಲೂ ಕೆರಿಬಿಯನ್ನರನ್ನು ಮಣಿಸಿ ಭಾರತ ಸರಣಿ ಕೈವಶಪಡಸಿಕೊಂಡಿತ್ತು.

ಭಾರತ vs ವೆಸ್ಟ್​ ಇಂಡೀಸ್​ ಟೆಸ್ಟ್ ವೇಳಾಪಟ್ಟಿ

  • ಜುಲೈ 12 ರಿಂದ 16 : ಮೊದಲ ಟೆಸ್ಟ್​ - ವಿಂಡ್ಸರ್ ಪಾರ್ಕ್ ಮೈದಾನ (ಡೊಮಿನಿಕಾ)
  • ಜುಲೈ 20 ರಿಂದ 24 : ಎರಡನೇ ಟೆಸ್ಟ್​ - ಕ್ವೀನ್ಸ್ ಪಾರ್ಕ್ ಓವಲ್‌ (ಟ್ರಿನಿಡಾಡ್‌)

ಭಾರತ vs ವೆಸ್ಟ್​ ಇಂಡೀಸ್​ ಏಕದಿನ ವೇಳಾಪಟ್ಟಿ

  • ಜುಲೈ 27 : ಮೊದಲ ಪಂದ್ಯ - ಕೆನ್ಸಿಂಗ್ಟನ್ ಓವಲ್‌ (ಬಾರ್ಬಡೋಸ್‌)
  • ಜುಲೈ 29 : ಎರಡನೇ ಪಂದ್ಯ - ಕೆನ್ಸಿಂಗ್ಟನ್ ಓವಲ್‌ (ಬಾರ್ಬಡೋಸ್‌)
  • ಆಗಸ್ಟ್ 1 : ಮೂರನೇ ಪಂದ್ಯ - ಬ್ರಿಯಾನ್ ಲಾರಾ ಮೈದಾನ (ಟ್ರಿನಿಡಾಡ್‌)

ಭಾರತ vs ವೆಸ್ಟ್​ ಇಂಡೀಸ್​ T20 ವೇಳಾಪಟ್ಟಿ

  • ಆಗಸ್ಟ್ 3 : ಮೊದಲ ಪಂದ್ಯ - ಬ್ರಿಯಾನ್ ಲಾರಾ ಮೈದಾನ (ಟ್ರಿನಿಡಾಡ್‌)
  • ಆಗಸ್ಟ್ 6 : ಎರಡನೇ ಪಂದ್ಯ - ಗಯಾನಾ ರಾಷ್ಟ್ರೀಯ ಕ್ರೀಡಾಂಗಣ
  • ಆಗಸ್ಟ್​ 8 : ಮೂರನೇ ಪಂದ್ಯ - ಗಯಾನಾ ರಾಷ್ಟ್ರೀಯ ಕ್ರೀಡಾಂಗಣ
  • ಆಗಸ್ಟ್ 12 : ನಾಲ್ಕನೇ ಪಂದ್ಯ - ಲಾಡರ್‌ಹಿಲ್‌
  • ಆಗಸ್ಟ್​ 13 : ಐದನೇ ಪಂದ್ಯ - ಬ್ರೋವರ್ಡ್ ಕೌಂಟಿ ಕ್ರಿಕೆಟ್ ಸ್ಟೇಡಿಯಂ

ಇದನ್ನೂ ಓದಿ:ವಿರಾಟ್‌ ಕೊಹ್ಲಿಗಾಗಿ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲಬೇಕು- ವೀರೇಂದ್ರ ಸೆಹ್ವಾಗ್

ABOUT THE AUTHOR

...view details