ಕರ್ನಾಟಕ

karnataka

ETV Bharat / sports

ಮಿಲ್ಖಾ ಸಿಂಗ್​ಗೆ ಗೌರವ: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ - ಮಿಲ್ಖಾ ಸಿಂಗ್​

91ನೇ ವಯಸ್ಸಿನಲ್ಲಿ ಸಾವನ್ನಪ್ಪಿರುವ ದಿಗ್ಗಜ ಅಥ್ಲೇಟ್​ ಮಿಲ್ಖಾ ಸಿಂಗ್​ಗೆ ಟೀಂ ಇಂಡಿಯಾ ಪ್ಲೇಯರ್ಸ್​ ವಿಶೇಷ ಗೌರವ ನೀಡಿದ್ದಾರೆ.

Team India
Team India

By

Published : Jun 19, 2021, 5:52 PM IST

ಸೌತಾಂಪ್ಟನ್​: ಕೊರೊನಾ ಮಹಾಮಾರಿಯಿಂದಾಗಿ ಫ್ಲೈಯಿಂಗ್ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​​(91) ಸಾವನ್ನಪ್ಪಿದ್ದು, ದೇಶದ ಜನರು ಕಂಬನಿ ಮಿಡಿದಿದ್ದಾರೆ. ಇವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಟೀಂ ಇಂಡಿಯಾ ಕ್ರಿಕೆಟ್​​ ಪ್ಲೇಯರ್ಸ್​ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದಿದ್ದು, ದಿಗ್ಗಜ ಅಥ್ಲೀಟ್​ಗೆ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.

ಭಾರತ - ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಫ್​ ಫೈನಲ್​ ಪಂದ್ಯ ನಡೆಯುತ್ತಿದ್ದು, ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ಲೇಯರ್ಸ್​​ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಆಗಮಿಸಿದರು. ಈ ಮೂಲಕ ದಿಗ್ಗಜ ಅಥ್ಲೀಟ್​ಗೆ ಗೌರವ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಟ್ವಿಟರ್​​ನಲ್ಲಿ ಫೋಟೋ ಶೇರ್​ ಮಾಡಿದೆ.

ಇದನ್ನೂ ಓದಿರಿ: ಜೀವನದ ಓಟ ನಿಲ್ಲಿಸಿದ ಭಾರತದ 'ಫ್ಲೈಯಿಂಗ್ ಸಿಖ್'​ ಖ್ಯಾತಿಯ ಮಿಲ್ಖಾ ಸಿಂಗ್!

ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಕೋಚ್​ ರವಿಶಾಸ್ತ್ರಿ ಸೇರಿದಂತೆ ಅನೇಕರು ಟ್ವಿಟರ್​ನಲ್ಲಿ ಸಂತಾಪ ಸೂಚಿಸಿ, ಕಂಬನಿ ಮಿಡಿದಿದ್ದಾರೆ.

ಫ್ಲೈಯಿಂಗ್​ ಸಿಖ್​ ಖ್ಯಾತಿಯ ಮಿಲ್ಖಾ ಸಿಂಗ್​(91), ಇಂದು ಕೊನೆಯುಸಿರೆಳೆದಿದ್ದಾರೆ. 1958ರಲ್ಲಿ ಏಷ್ಯನ್​ ಕ್ರೀಡಾಕೂಟದಲ್ಲಿ 200 ಮೀಟರ್​ ಹಾಗೂ 400 ಮೀಟರ್​ ಓಟದಲ್ಲಿ ಚಿನ್ನ, 1958ರ ಕಾಮನ್​ ವೆಲ್ತ್​ನಲ್ಲಿ ಚಿನ್ನದ ಪದಕ ಗೆದ್ದು ಹೊಸ ದಾಖಲೆ ನಿರ್ಮಾಣ ಮಾಡಿದ್ದರು. ವಿಶೇಷವೆಂದರೆ ಸ್ವತಂತ್ರ ಭಾರತದಲ್ಲಿ ಭಾರತಕ್ಕೆ ಕಾಮನ್​ವೆಲ್ತ್​ನಲ್ಲಿ ಬಂದ ಮೊಟ್ಟ ಮೊದಲ ಸ್ವರ್ಣಪದಕ ಇದಾಗಿತ್ತು. ಇವರ ಸಾಧನೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ಸಿಕ್ಕಿದೆ.

ABOUT THE AUTHOR

...view details