ಕರ್ನಾಟಕ

karnataka

ETV Bharat / sports

ಸೆಂಚುರಿಯನ್​ ಗೆಲುವಿನೊಂದಿಗೆ ಹೊಸ ವರ್ಷ ಆಚರಿಸಿದ ಭಾರತ ತಂಡ - ರವಿ ಚಂದ್ರನ್​​ ಅಶ್ವಿನ್​ ಹೊಸ ವರ್ಷ

ಸೆಂಚುರಿಯನ್​​ನಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​ ಗೆಲ್ಲುವು ಮೂಲಕ ಸೂಪರ್​ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಡೆ ಪಾತ್ರವಾಗಿತ್ತು..

Team India new year celebration
Team India new year celebration

By

Published : Jan 1, 2022, 7:29 PM IST

ಸೆಂಚುರಿಯನ್ ​: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಟೆಸ್ಟ್​ ಪಂದ್ಯವನ್ನು ಗೆದ್ದಿರುವ ಭಾರತ ತಂಡ ಅದೇ ಖುಷಿಯಲ್ಲಿ ನೂತನ ವರ್ಷಾಚರಣೆಯನ್ನು ಮಾಡಿ ಸಂಭ್ರಮಿಸಿದೆ.

ಸೆಂಚುರಿಯನ್​​ನಲ್ಲಿ ಬಾಕ್ಸಿಂಗ್​ ಡೇ ಟೆಸ್ಟ್​ ಗೆಲ್ಲುವು ಮೂಲಕ ಸೂಪರ್​ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ಈ ಸಾಧನೆ ಮಾಡಿ ಮೊದಲ ಏಷ್ಯಾ ತಂಡ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಡೆ ಪಾತ್ರವಾಗಿತ್ತು.

ಭಾರತ ತಂಡ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರಾಹುಲ್ ದ್ರಾವಿಡ್​ ಸೇರಿದಂತೆ ಟೀಂ ಇಂಡಿಯಾ ಆಟಗಾರರೆಲ್ಲರೂ ಈ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್​ ಅಸ್ವಿನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ.

ಹೊಸ ವರ್ಷ ಹೊಸ ಭರವಸೆ.. ನಿಮ್ಮೆಲ್ಲರಿಗೂ 2022ರ ವರ್ಷ ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಅಶ್ವಿನ್ ಭಾರತ ತಂಡದ ಸದಸ್ಯರೊಂದಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಕೂಡ ಅನುಷ್ಕಾ ಶರ್ಮಾ ಸೇರಿದಂತೆ ಭಾರತೀಯ ಆಟಗಾರರಿರುವ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು, ಹೊಸ ವರ್ಷ ಪ್ರತಿಯೊಬ್ಬರಿಗೂ ಸಂತೋಷವನ್ನ ತರಲಿದೆ ಎಂಬ ಭರವಸೆಯಿದೆ. ನಾವು ನಿಮಗೆ ನಮ್ಮ ಪ್ರೀತಿಯ ಶುಭಾಶಯಗಳನ್ನು ಕಳುಹಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:2022 ಭಾರತೀಯ ಕ್ರಿಕೆಟ್​ಗೆ ಅತ್ಯಂತ ಬಿಡುವಿಲ್ಲದ ವರ್ಷ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ABOUT THE AUTHOR

...view details