ಢಾಕಾ (ಬಾಂಗ್ಲಾದೇಶ): ಮೀರ್‌ಪುರದಲ್ಲಿ ಭಾನುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಭಾರತ ಕ್ರಿಕೆಟ್ ತಂಡಕ್ಕೆ ತನ್ನ ಪಂದ್ಯದ ಶುಲ್ಕದ ಶೇ. 80 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ತನಗೆ ನೀಡಿದ ನಿಗದಿತ ಅವಧಿಯಲ್ಲಿ ಭಾರತದ ತನ್ನ ಬೌಲಿಂಗ್ ಮುಗಿಸಲು ವಿಫಲವಾಗಿದ್ದರಿಂದ ಈ ಪ್ರಮಾಣದ ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ರಂಜನ್ ಮದುಗಲೆ ತಿಳಿಸಿದ್ದಾರೆ.
ಭಾರತವು ಗುರಿಗಿಂತ ನಾಲ್ಕು ಓವರ್‌ಗಳ ಕೊರತೆಯಿ ಇದೆ ಎಂದು ಹೇಳಿರುವ ಅವರು, ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ ಆಟಗಾರರು ಮತ್ತು ಸಿಬ್ಬಂದಿಗೆ ಕನಿಷ್ಠ ಓವರ್ - ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲರಾಗಿದ್ದರಿಂದ ಪ್ರತಿ ಓವರ್‌ಗೆ ಅವರ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗುತ್ತದೆ ಎಂದಿದ್ದಾರೆ.