ಕರ್ನಾಟಕ

karnataka

ETV Bharat / sports

ರೋಹಿತ್​ ಶರ್ಮಾ ವಿಕೆಟ್ ಪತನವಾಗ್ತಿದ್ದಂತೆ ಬ್ಯಾಟ್ ಮಾಡಲು ಮೈದಾನಕ್ಕಿಳಿದ ಜಾರ್ವೋ.. ಮುಂದೇನಾಯ್ತು ನೋಡಿ! - ಭಾರತ ವರ್ಸಸ್ ಇಂಗ್ಲೆಂಡ್​ ಟೆಸ್ಟ್​​

ಇಂಗ್ಲೆಂಡ್ ತಂಡದ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದ ವೇಳೆ ಆಶ್ಚರ್ಯಕರ ಘಟನೆವೊಂದು ನಡೆದಿದ್ದು, ರೋಹಿತ್ ಶರ್ಮಾ ವಿಕೆಟ್ ಪತನವಾಗುತ್ತಿದ್ದಂತೆ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಬ್ಯಾಟ್ ಮಾಡಲು ಮುಂದಾಗಿದ್ದಾರೆ.

Team india fan jarvo
Team india fan jarvo

By

Published : Aug 27, 2021, 10:40 PM IST

ಲೀಡ್ಸ್​​(ಇಂಗ್ಲೆಂಡ್​):ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಭಾಗಿಯಾಗಿದ್ದು, ಪಂದ್ಯದ ಮೂರನೇ ದಿನವಾದ ಇಂದು ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದೆ. ಇದರ ಮಧ್ಯೆ ಮೈದಾನದಲ್ಲಿ ಅಪರೂಪದ ಘಟನೆವೊಂದು ನಡೆದಿದೆ. ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ 59 ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿ, ಪೆವಿಲಿಯನ್​ಗೆ ಹೋಗುತ್ತಿದ್ದಂತೆ ಭಾರತದ ಜರ್ಸಿ ತೊಟ್ಟ ಕ್ರಿಕೆಟ್ ಪ್ರೇಮಿಯೊಬ್ಬ ಮೈದಾನಕ್ಕೆ ಇಳಿದು, ಬ್ಯಾಟ್ ಮಾಡಲು ಮುಂದಾಗಿದ್ದು, ಕೆಲ ನಿಮಿಷಗಳ ಕಾಲ ಹೈಡ್ರಾಮಾ ಸೃಷ್ಟಿ ಮಾಡಿದ್ದಾನೆ.

ಟೀಂ ಇಂಡಿಯಾದ ಅಭಿಮಾನಿಯಾಗಿರುವ ಜಾರ್ವೋ ಭಾರತ ತಂಡದ ಜರ್ಸಿ ತೊಟ್ಟಿದ್ದು, ಪ್ಯಾಡ್ ಕಟ್ಟಿಕೊಂಡು,​ ಹೆಲ್ಮೇಟ್​ ಹಾಕಿಕೊಂಡು, ಕೈಯಲ್ಲಿ ಬ್ಯಾಟ್​ ಹಿಡಿದುಕೊಂಡು ಮೈದಾನಕ್ಕೆ ಓಡಿ ಬಂದಿದ್ದಾನೆ. ಈ ವೇಳೆ ಅಂಪೈರ್​ಗಳು ಕ್ಷಣ ಕಾಲ ಆಶ್ಚರ್ಯ ಹಾಗೂ ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಮೈದಾನದ ಸಿಬ್ಬಂದಿ ಆತನನ್ನ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ವೇಳೆ ಕೂಡ ಈ ವ್ಯಕ್ತಿ ಮೈದಾನಕ್ಕೆ ನುಗ್ಗಿ ಕೆಲ ಹೊತ್ತು ಆತಂಕ ಸೃಷ್ಟಿ ಮಾಡಿದ್ದರು. ಇಂದು ಸಹ ಅದೇ ರೀತಿ ನಡೆದುಕೊಂಡಿದ್ದು, ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ​​

ಇಂಗ್ಲೆಂಡ್​ನ ಲೀಡ್ಸ್​ ಮೈದಾನದಲ್ಲಿ ಭಾರತ- ಇಂಗ್ಲೆಂಡ್​ ತಂಡಗಳ ನಡುವೆ ಮೂರನೇ ಟೆಸ್ಟ್​ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ ಕೇವಲ 78ರನ್​ಗಳಿಗೆ ಆಲೌಟ್​ ಆಗಿದ್ದು, ಇದಕ್ಕೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ ತಂಡ 432 ರನ್​ಗಳಿಕೆ ಮಾಡಿದೆ. ಇದೀಗ ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟ್​ ಮಾಡುತ್ತಿರುವ ಭಾರತ 2 ವಿಕೆಟ್​ ಕಳೆದುಕೊಂಡು 185ರನ್​ಗಳಿಕೆ ಮಾಡಿದೆ. ಸತತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದ ಚೇತೇಶ್ವರ್ ಪೂಜಾರಾ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ.

ಇದನ್ನೂ ಓದಿರಿ:ಸ್ಟನ್ನಿಂಗ್​ ಕ್ಯಾಚ್​ ಹಿಡಿದು, ರಾಹುಲ್​ಗೆ ಪೆವಿಲಿಯನ್​ ಹಾದಿ ತೋರಿಸಿದ ಬೈರ್​​ಸ್ಟೋವ್​!

ABOUT THE AUTHOR

...view details